ವಿಮೆಗೂ ನಿರಾಸಕ್ತಿ : ಜಿಲ್ಲೆಯಲ್ಲಿ ಕಳೆದ ವರ್ಷಗಳಿಂದ ವಿಮೆಗೆ ಹೆಚ್ಚಿನ ರೈತರು ನೋಂದಯಿಸಿಕೊಳ್ಳುತ್ತಿದ್ದರು. 2024-25 ಸಾಲಿನಲ್ಲಿ 15,974 ರೈತರು ನೋಂದಯಿಸಿಕೊಂಡಿದ್ದು, 5,401 ಫಲಾನುಭವಿಗಳಿಗೆ 9.11 ಕೋಟಿ ರೂ. ವಿಮೆ ಪರಿಹಾರ ಇತ್ಯರ್ಥಪಡಿಸಲಾಗಿದೆ. 2025-26 ಮುಂಗಾರಿನಲ್ಲಿ 11,710 ರೈತರು ನೋಂದಾಯಿಸಿದ್ದು, 5,017 ಫಲಾನುಭವಿಗಳಿಗೆ 6.31 ಕೋಟಿ ರೂ. ಬಿಡುಗಡೆಯಾಗಿದೆ. ಪ್ರಸ್ತಕ ಸಾಲಿನಲ್ಲಿ ಈವರೆಗೆ 2,690ರೈತರು ನೋಂದಾಯಿಸಿಕೊಂಡಿದ್ದು, ನೋಂದಣಿ ಪ್ರಕ್ರಿಯೆ ಹಂತದಲ್ಲಿದೆ. ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ ಸೇರಿದಂತೆ ಕೆಲ ಬೆಳೆಗಳಿಗೆ ಜು.31ರಂದು ನೋಂದಣಿಗೆ ಕೊನೆಯ ದಿನವಾಗಿದೆ.