

ಪ್ರಮುಖ ಮುಖ್ಯಾಂಶಗಳು
ಶಿಕ್ಷಕರ ಭವನಕ್ಕಾಗಿ ರಾಮಸಾಗರ ಗ್ರಾಪಂ ವ್ಯಾಪ್ತಿಗೆ ಸೇರಿದ ಸಿದ್ದೇಶ್ವರ ವೃತ್ತ ಬಳಿಯ ಬಡಾವಣೆಯಲ್ಲಿ ಸಿಎ ಸೈಟ್ ಗುರುತಿಸಿದ್ದು, ನಿವೇಶನ ನೀಡುವಂತೆ ಗ್ರಾಪಂಗೆ ಪತ್ರ ಬರೆಯಲಾಗಿದೆ. ಅನುಮೋದನೆ ಪಡೆದು ಶಿಕ್ಷಕರ ವಂತಿಗೆ ಮೂಲಕ ನಿವೇಶನ ಖರೀದಿಸಿ ಗುರು ಭವನ ನಿರ್ಮಿಸಲಾಗುವುದು.
ಪಟ್ಟಣದಲ್ಲಿ ನೌಕರ ಭವನಕ್ಕೆ ನಿವೇಶನ ಒದಗಿಸುವಂತೆ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ನೌಕರರ ಭವನಕ್ಕೆ ನಿವೇಶನ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.