ಪಟ್ಟಣದಲ್ಲಿ ಆವಿಷ್ಕಾರ ವೇದಿಕೆಯಿಂದ ಆಯೋಜಿಸಿದ್ದ ಕುವೆಂಪು ಸ್ಮರಣ ದಿನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಕುವೆಂಪು ಎಲ್ಲ ಪ್ರಕಾರದ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಮನುಜಮತ ವಿಶ್ವಪಥ ಎಂದು ಸಾರಿ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಜಾತಿ, ಮತ, ಪಂಥಕ್ಕೆ ಆದ್ಯತೆ ನೀಡದೆ ಮಾನವೀಯ ಧರ್ಮ ಮೇಲು ಎಂದು ಸಾರಿದ್ದಾರೆ. ಕುವೆಂಪು ಅವರ ಸಾಹಿತ್ಯ ಎಲ್ಲ ವರ್ಗ ಹಾಗೂ ವಯೋಮಾನದವರಿಗೆ ಅನ್ವಯವಾಗುವಂತೆ ವಿಶಾಲ ವ್ಯಾಪ್ತಿ ಹಾಗೂ ಆಯಾಮ ಒಳಗೊಂಡಿದೆ ಎಂದರು.