ಕುಮ್ಮಟದುರ್ಗ-ಹೊಯ್ಸಳರ ಕಾಲದ ಶಾಸನ ಪತ್ತೆ

ಕಂಪ್ಲಿ ತಾಲೂಕಿನ ಬಳ್ಳಾಪುರದಲ್ಲಿ ದೊರೆತ ವೀರಗಲ್ಲು.
ಕಂಪ್ಲಿ ತಾಲೂಕಿನ ಬಳ್ಳಾಪುರದಲ್ಲಿ ದೊರೆತ ವೀರಗಲ್ಲು.
Published on
ಕಂಪ್ಲಿ: ಬಳ್ಳಾಪುರ ಗ್ರಾಮದ ಗದ್ದೆಯಲ್ಲಿ 12ರಿಂದ 13ನೇ ಶತಮಾನದ ಕುಮ್ಮಟದುರ್ಗ-ಹೊಯ್ಸಳರ ಕಾಲದ್ದು ಎನ್ನಲಾದ ವೀರಗಲ್ಲು ಪತ್ತೆಯಾಗಿದೆ.
ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ತಳವಾರ ನರಸಿಂಹ ಮತ್ತು ಅವರ ತಂಡ ಈ ಶಾಸನ ಪತ್ತೆ ಮಾಡಿದೆ. ರೈತ ಹರಿಜನ ದೊಡ್ಡಮಾಯಪ್ಪ ಅವರ ಗದ್ದೆಯಲ್ಲಿ ಬಿದ್ದಿದ್ದ ಮೂರು ಭಾಗಗಳನ್ನು ಜೋಡಿಸಿ ವೀರಗಲ್ಲನ್ನು ಅಧ್ಯಯನ ಮಾಡಲಾಗಿದೆ. ಶಾಸನದ ಇನ್ನೊಂದು ಭಾಗ ಕಣ್ಮರೆಯಾಗಿದೆ.
ನಾಗಯ ಎಂಬ ವೀರನು ಚಿಂತಮಕಲ್ಲು (ಚಿತ್ರದುರ್ಗ) ಕಾಳಗದಲ್ಲಿ ವೀರ ಮರಣ ಅಪ್ಪಿದ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ. ಪ್ರಾಂತಾಧಿಕಾರಿ ಗೋನೆಯ ನಾಯಕನ ಮಗ ಬೊಮ್ಮಯ್ಯ ಈತನ ಮಗ ನಾಗಯ ವೀರನು ರಾಜ್ಯದ ಉಳಿವಿಗಾಗಿ ಚಿಂತಮಕಲ್ಲು ಸ್ಥಳದಲ್ಲಿ ನಡೆದ ಕಾಳಗದಲ್ಲಿ ವೀರಮರಣ ಹೊಂದಿ ಸ್ವರ್ಗ ಸೇರಿದ ವಿಷಯ ಸಾರುತ್ತದೆ ಎಂದು ಮೈಸೂರಿನ ಭಾರತೀಯ ಪುರಾತತ್ವ ಇಲಾಖೆ ನಿರ್ದೇಶಕ ಡಾ.ಮುನಿರತ್ನಂ ತಿಳಿಸಿದ್ದಾರೆ.
ಗಂಗಾವತಿಯ ಇತಿಹಾಸ ಸಂಶೋಧಕ ಶರಣಪ್ಪ ಕೋಲ್ಕಾರ ಅವರು ಈ ವೀರಗಲ್ಲು ಕಂಪಿಲರಾಯನ ಕಾಲದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net