ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಬಳ್ಳಾರಿಯ ರಾಯಲ್ ಕಾಲನಿಯ ಶ್ರೀ ವಿಠಲ ಕೃಷ್ಣ ದೇವಸ್ಥಾನಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅಲಂಕಾರಿಸಲಾಗಿತ್ತು.
ಬಳ್ಳಾರಿಯ ರಾಯಲ್ ಕಾಲನಿಯ ಶ್ರೀ ವಿಠಲ ಕೃಷ್ಣ ದೇವಸ್ಥಾನಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅಲಂಕಾರಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಕೃಷ್ಣನಿಗೆ ಹೂವಿನ ಅಲಂಕಾರ
ಬಳ್ಳಾರಿ : ನಗರದ ರಾಯಲ್ ಕಾಲನಿಯ ಶ್ರೀವಿಠಲ ಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮವು ಶ್ರದ್ಧಾ-ಭಕ್ತಿಯಿಂದ ಶುಕ್ರವಾರ ಅದ್ಧೂರಿಯಾಗಿ ಜರುಗಿತು. ಧರ್ಮ ಸಂಸ್ಥಾಪನೆಗಾಗಿ ಪ್ರತಿ ಯುಗದಲ್ಲೂ ಅವತರಿಸುವ ಶ್ರೀಕೃಷ್ಣನ ಜನ್ಮದಿನೋತ್ಸವವನ್ನು ಭಕ್ತರು ಸಡಗರದಿಂದ ಆಚರಿಸಿದರು. ಜನ್ಮಾಷ್ಟಮಿ ದಿನದ ಅಂಗವಾಗಿ ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯಾಭಿಷೇಕ, ಮಹಾಭಿಷೇಕ ಹಾಗೂ ಪಂಚಾಮೃತಾಭಿಷೇಕ ಪೂಜಾ ಕೈಂಕರ್ಯಗಳು ನೆರವೇರಿದವು. ಶ್ರೀಕೃಷ್ಣನಿಗೆ ಹೂವಿನ ಅಲಂಕಾರ ಮಾಡಿ, ಮಹಾಮಂಗಳಾರತಿ ನೆರವೇರಿಸಲಾಯಿತು.
ಉತ್ಸವದ ಭಾಗವಾಗಿ ಮಹಿಳೆಯರು ಶ್ರೀಕೃಷ್ಣನ ಉತ್ಸವ ಮೂರ್ತಿ ಉಯ್ಯಲೆಯಲ್ಲಿ ತೂಗಿಸಿ ಲಾಲಿ ಹಾಡುಗಳನ್ನು ಹಾಡಿದರು. ಮಕ್ಕಳು ನಾನಾ ಭಕ್ತಿಗೀತೆ ಹಾಗೂ ದಾಸರ ಕೀರ್ತನೆ ಪ್ರಸ್ತುತಪಡಿಸಿ ಗಮನ ಸೆಳೆದರು. ಬಳಿಕ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ನಗರ ಪ್ರದಕ್ಷಿಣೆಯ ಮೂಲಕ ಮನೆ ಮನೆಗೆ ಕರೆದೊಯ್ಯಲಾಯಿತು. ಮನೆ ಬಾಗಿಲಿಗೆ ಬಂದ ಮೂರ್ತಿಗೆ ಭಕ್ತರು ಹಾಲು, ಮೊಸರು ಅರ್ಪಿಸಿ ಪೂಜೆ ಸಲ್ಲಿಸಿದರು. ಇದೇ ವೇಳೆ ಮಹಿಳೆಯರು ಕೋಲಾಟ ಆಡುತ್ತಾ ಭಕ್ತಿಪರವಶರಾದರು. ದೇಗುಲದ ಮುಂಭಾಗದಲ್ಲಿ ಗಾಯಕ ಮೈಸೂರು ರಾಮಚಂದ್ರ ಆಚಾರ್‌ಅವರಿಂದ ಏರ್ಪಡಿಸಲಾಗಿದ್ದ ‘ದಾಸವಾಣಿ’ ಸಂಗೀತ ಕಾರ್ಯಕ್ರಮ ಭಕ್ತರ ಮನಸೂರೆಗೊಳಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net