ಕಂಪ್ಲಿ: ಕೇಂದ್ರ ಸರ್ಕಾರದ ವಿದ್ಯುತ್ ಇಲಾಖೆ ಖಾಸಗೀಕರಣ ನೀತಿ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘದ ಪದಾಧಿಕಾರಿಗಳು ಜೆಸ್ಕಾಂ ಕಚೇರಿ ಆವರಣದಲ್ಲಿ ಗುರುವಾರ ತೋಳಿಗೆ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
ಜೆಸ್ಕಾಂ ಎಇಇ ಕೆ.ಶ್ರೀನಿವಾಸಪ್ರಸಾದ್ ಮಾತನಾಡಿ, ಕೇಂದ್ರ ಸರ್ಕಾರ 2026ರಲ್ಲಿ ವಿದ್ಯುತ್ ಇಲಾಖೆಯನ್ನು ಖಾಸಗಿಕರಣಗೊಳಿಸಲು ಮುಂದಾಗಿರುವುದು ನೌಕರರ ಹಿತಾಸಕ್ತಿಗೆ ವಿರುದ್ಧವಾಗಿದೆ. ರೈತರು, ಗ್ರಾಹಕರು ಮತ್ತು ನೌಕರರ ಹಿತದೃಷ್ಟಿಯಿಂದ ವಿದ್ಯುತ್ ಕಾಯ್ದೆ ತಿದ್ದುಪಡಿ ಬಿಲ್‌ನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘದ ಅಧ್ಯಕ್ಷ ಡಿ.ಶ್ರೀನಿವಾಸ, ಜೆಸ್ಕಾಂ ನಗರ ಶಾಖಾಧಿಕಾರಿ ವಿನೋದ್ ಕುಮಾರ್ ಬ್ಯಾಲಾಳ್, ಗ್ರಾಮೀಣ ಶಾಖಾಧಿಕಾರಿ ಮಹಾಂತೇಶ ತುಂಬಳದ, ಮೆಟ್ರಿ ಶಾಖಾಧಿಕಾರಿ ಮಹಮ್ಮದ್ ಶಮೀಉಲ್ಲಾ, ಸಹಾಯಕ ತಾಂತ್ರಿಕ ಅಭಿಯಂತರ ಭೀಮೇಶ, ಜೆಸ್ಕಾಂ ಕಂದಾಯ, ಕೆಪಿಟಿಸಿಎಲ್ ಸಿಬ್ಬಂದಿ ಇದ್ದರು.