ಕೊಟ್ಟೂರೇಶ್ವರ ಮಹಾತ್ಮೆ ನಾಟಕ ಪ್ರದರ್ಶನ ನಾಳೆ

ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರದಲ್ಲಿ ಫೆ.26 ರಂದು ಶ್ರೀ ಗುರು ಕೊಟ್ಟೂರೇಶ್ವರ ಮಹಾತ್ಮೆ ನಾಟಕ ಪ್ರದರ್ಶನ ಹಿನ್ನೆಲೆಯಲ್ಲಿ ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಿಂದ ಜ್ಯೋತಿ ತೆಗೆದುಕೊಂಡು ಹೋಗಲಾಯಿತು. ನಾಟಕದ ಮ್ಯಾನೇಜರ್ ಬಿ.ರಾಚೋಟಪ್ಪ, ಕಲಾವಿದರಾದ ಪ್ರವೀಣ, ಎಚ್.ಎಂ.ಶಿವಲಿಂಗಯ್ಯ, ಬಿ.ಸಿದ್ದೇಶ, ಬಿ.ಲೋಕೇಶ, ಎಸ್.ಎಂ.ಗಂಗಾಧರ ಇತರರಿದ್ದರು.

Published on
ಕೊಟ್ಟೂರು: ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮದಲ್ಲಿ ಫೆ.26 ರಂದು ರಾತ್ರಿ ‘ಶ್ರೀ ಗುರು ಕೊಟ್ಟೂರೇಶ್ವರ ಮಹಾತ್ಮೆ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ನಾಟಕದ ಮ್ಯಾನೇಜರ್ ಬಿ.ರಾಚೋಟಪ್ಪ ಹೇಳಿದರು. ನಾಟಕ ಪ್ರದರ್ಶನ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಿಂದ ಜ್ಯೋತಿ ಕೊಂಡೊಯ್ಯುವಾಗ ಮಾಹಿತಿ ನೀಡಿದರು.
ದಶಮಾಪುರದಲ್ಲಿ ಬಸವೇಶ್ವರ ಹಾಗೂ ಕರಿಬಸವೇಶ್ವರ ರಥೋತ್ಸವ ಅಂಗವಾಗಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದರು. ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಿಂದ ತೆಗೆದುಕೊಂಡು ಹೋಗುತ್ತಿರುವ ಜ್ಯೋತಿ ಮೂಲಕ ಕೊಟ್ಟೂರಿನ ಬೂತ ಭುಜಂಗ ಮಠದ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡುವರು. ನಾಟಕದಲ್ಲಿ ಪಂಚಗಣಾಧೀಶ್ವರರು ಹಾಗೂ ಕೊಟ್ಟೂರೇಶ್ವರರ ಮಹಿಮೆ ಕುರಿತು ಮಾಹಿತಿ ಇರಲಿದೆ. ನಾಟಕದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ದೃಶ್ಯ ಕೂಡ ಇರಲಿದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net