ಸಿಲಿಂಡರ್ ಕುರಿತು ಮಾಹಿತಿ ತಿಳಿದಿರಲಿ

ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಡುಗೆ ಅನಿಲ ಸುರಕ್ಷತಾ ಕ್ರಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಡಾ.ಅನ್ನಪೂರ್ಣ ಗುಡದೂರು ಮಾತನಾಡಿದರು.
ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಡುಗೆ ಅನಿಲ ಸುರಕ್ಷತಾ ಕ್ರಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಡಾ.ಅನ್ನಪೂರ್ಣ ಗುಡದೂರು ಮಾತನಾಡಿದರು.
Published on
ಕಂಪ್ಲಿ: ಎಲ್ಪಿಜಿ ಸಿಲಿಂಡರ್ ಬಳಸುವಾಗ ಸುರಕ್ಷತಾ ಕ್ರಮಗಳ ಕುರಿತು ಜಾಗ್ರತೆ ವಹಿಸಬೇಕು ಎಂದು ಅಡುಗೆ ಅನಿಲ ವಿತರಕ ಅರವಿಂದ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಡುಗೆ ಅನಿಲ ಬಳಕೆ ಮತ್ತು ಸುರಕ್ಷತಾ ಕ್ರಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಗೃಹಬಳಕೆ ಗ್ಯಾಸಿನ ಸ್ವಭಾವ, ಸಂಗ್ರಹಣೆ, ಸರಿಯಾದ ಬಳಕೆ ಮತ್ತು ಅಸಾಧಾರಣ ಪರಿಸ್ಥಿತಿಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ತಿಳಿದಿರಬೇಕು. ಸಿಲಿಂಡರನ್ನು ನಿಲ್ಲಿಸಿದ ಸ್ಥಿತಿಯಲ್ಲಿ ಇರಿಸಬೇಕು. ಗುಣಮಟ್ಟದ ಪೈಪ್ ಬಳಸಬೇಕು. ಆಗಾಗ ರೆಗ್ಯುಲೇಟರ್ ಪರಿಶೀಲಿಸಬೇಕು. ವಾಸನೆ, ಶಬ್ದ, ಜ್ವಾಲೆಯ ಬಣ್ಣ ಬದಲಾವಣೆ ಮೂಲಕ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗುವುದನ್ನು ಗುರುತಿಸಬೇಕು ಎಂದು ಸಲಹೆ ನೀಡಿದರು.
ಗ್ಯಾಸ್ ಸೋರಿಕೆಯಾದಾಗ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ಪ್ರಾಚಾರ್ಯ ಡಾ.ಶ್ರೀನಿವಾಸರೆಡ್ಡಿ, ರೆೆಡ್ ಕ್ರಾಸ್ ಘಟಕ ಸಂಚಾಲಕ ಡಾ.ಚಂದ್ರಶೇಖರ, ಉಪನ್ಯಾಸಕರಾದ ಡಾ.ಅನ್ನಪೂರ್ಣ ಗುಡುದೂರು, ಎಂ.ಪಿ.ಬಾಲಾಜಿ, ಟಿ.ಎಂ.ಆರ್.ರಾಜ್ಮಾ, ಗ್ರಂಥಪಾಲಕ ಎ.ಜಿ.ವೀರಭದ್ರಪ್ಪ, ಅಧೀಕ್ಷಕಿ ನಾಗಮ್ಮ, ಬಿ.ಸಿದ್ಧಾರೂಢ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net