ಕೆಐಎಡಿಬಿ ವಂಚನೆ ಪ್ರಕರಣ ಸಿಐಡಿಗೆ ಹಸ್ತಾಂತರ

ಸಂತೋಷ ಕುಮಾರ್
ಸಂತೋಷ ಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ಪ್ರಕರಣ
ಬಳ್ಳಾರಿ : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಬಳ್ಳಾರಿ ವಲಯ ಕಚೇರಿಯಲ್ಲಿ ನಡೆದ ಬಹುಕೋಟಿ ವಂಚನೆ ಪ್ರಕರಣವೂ ಇದೀಗ ಸಿಐಡಿಗೆ ಹಸ್ತಾಂತರಿಸಿದೆ. ಈ ವರ್ಷದಲ್ಲಿ ಜಿಲ್ಲೆಯ ಎರಡನೇ ಪ್ರಕರಣ ಸಿಐಡಿಗೆ ವಹಿಸಲಾಗಿದೆ.
ಕೆಐಎಡಿಬಿಯ ವಲಯ ಕಚೇರಿಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದ ಸಂತೋಷ ಕುಮಾರ್ ಸೇರಿ ಒಟ್ಟು ಆರು ಜನರ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರು ಕೆಐಎಡಿಬಿ ವಲಯ ಕಚೇರಿಯಲ್ಲಿ ಇಲಾಖೆಯ ಅಧಿಕಾರಿಗಳ ನಕಲಿ ಸಹಿ ಮಾಡಿ, ಕಚೇರಿಯ ಚೆಕ್‌ಗಳ ಬಳಸಿಕೊಂಡು 16.17 ಕೋಟಿ ರೂ. ವಂಚಿಸಿದ್ದರು.
ಪ್ರಕರಣದ ಪ್ರಮುಖ ಆರೋಪಿ ಎಚ್.ಸಂತೋಷ ಕುಮಾರ್ 2016ರಿಂದ ಮಾ. 2025ರವರೆಗೆ ಕೆಐಡಿಬಿಯ ಕಚೇರಿಯಲ್ಲಿ ಹೊರಗುತ್ತಿಗೆಯಲ್ಲಿ ಲಿಟರೇಟ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿಯೇ ಸರ್ಕಾರಿ ನೌಕರ ನಜೀರ್ ಅಹಮದ್ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಸಂತೋಷ ಕುಮಾರನನ್ನು ವಲಯ ಕಚೇರಿಯ ಯೂನಿಯನ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಖಾತೆಗೆ ಸಂಬಂಧಿಸಿದಂತೆ ಚೆಕ್ ಬುಕ್ ನಿರ್ವಹಣೆ, ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಸೇರಿ ಒಟ್ಟು ಖರ್ಚು - ವೆಚ್ಚ ನಿರ್ವಹಿಸುತ್ತಿದ್ದ. 2022ರಿಂದ 2026ರವರೆಗೆ ಕೆಐಎಡಿಬಿ ಬ್ಯಾಂಕ್ ಖಾತೆಯ ಚೆಕ್ ಮೂಲಕ ನಕಲಿ ಸಹಿ ಕುಟುಂಬಸ್ಥರಿಗೆ, ಪರಿಚಯಸ್ಥರಿಗೆ 16.17 ಕೋಟಿ ರೂ. ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದ. ಮಂಡಳಿಯ ವಲಯ ಕಚೇರಿಯ ಎಕ್ಸಿಕ್ಯೂಟಿವ್ ಇಂಜನಿಯರ್ ಎಸ್.ಎಂ.ಕೊಳಲಗಿ ದಾಖಲೆ ಪರಿಶೀಲಿಸಿ ವಂಚನೆ ಪತ್ತೆ ಹಚ್ಚಿ ದೂರು ದಾಖಲಿಸಿದ್ದರು. ಬಳಿಕ ಮೊಬೈಲ್ ಲೋಕೆಷನ್ ಆಧಾರಿತವಾಗಿ ಆರೋಪಿ ಸಂತೋಷ ಕುಮಾರನನ್ನು ಇಲ್ಲಿನ ತಿಲಕನಗರದಲ್ಲಿ ಏ.16ರಂದು ಪತ್ತೆ ಹಚ್ಚಿ ಬಂಧಿಸಲಾಗಿತ್ತು. ಅಂದೇ ರಾತ್ರಿ ಶೌಚಾಲಯಕ್ಕೆ ಹೋಗುವುದಾಗಿ ಪೊಲೀಸರಿಗೆ ನಂಬಿಸಿ ಠಾಣೆಯಿಂದ ಪರಾರಿಯಾಗಿದ್ದ. ಎರಡು ದಿನ ನಂತರ ಮತ್ತೋಮ್ಮೆ ಮೊಬೈಲ್ ಲೋಕೇಷನ್ ಆಧಾರಿತವಾಗಿ ಇಲ್ಲಿನ ಬಂಡಿಹಟ್ಟಿ ಪ್ರದೇಶದಲ್ಲಿ ಬಂಧಿಸಲಾಗಿತ್ತು. ಪರಾರಿಯಾದ ನಂತರ ಆರೋಪಿಯು ಗುಡೇಕೋಟೆ ಹಾಗೂ ಕೂಡ್ಲಿಗಿ ಸೇರಿದಂತೆ ವಿವಿಧೆಡೆ ಸಂಚರಿಸಿರುವುದಾಗಿ ಒಪ್ಪಿಕೊಂಡಿದ್ದ.
ಮೇಲಧಿಕಾರಿಗಳ ಭಾಗಿ ಆರೋಪ : ಒಟ್ಟಾರೆ ಈ ಪ್ರಕರಣದಲ್ಲಿ ಮೇಲಧಿಕಾರಿಗಳ ಪಾತ್ರ ಪ್ರಮುಖವಾಗಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಮೇಲಧಿಕಾರಿಗಳು ಹಣ ಕಬಳಿಸುವ ಯತ್ನದಿಂದ ಹಣ ವಂಚನೆಯ ಮಾಹಿತಿ ಸಂತೋಷ ಬಳಿ ತಿಳಿಸಿದ್ದಾರೆ. ವಂಚನೆ ಮಾಹಿತಿ ತಿಳಿದಿದ್ದ ಸಂತೋಷ ಕುಮಾರ ಕೋಟ್ಯಾಂತರ ಹಣ ವಂಚಿಸಿ ಆರೋಪಿ ಸಂತೋಷ ಕೆಲ ಅಧಿಕಾರಿಗಳು ಹಣ ಹಂಚಿಕೊಂಡಿದ್ದಾರೆ. ವಂಚನೆಯಲ್ಲಿ ಮೇಲಧಿಕಾರಿಗಳಿಂತ ಹೆಚ್ಚಿನ ಹಣ ಆರೋಪಿ ಸಂತೋಷ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂಬ ಅಂಶ ಮೇಲಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಪ್ರಕರಣದಿಂದ ನುಣಚಿಕೊಂಡಿದ್ದಾರೆ ಎಂದು ಪೊಲೀಸರ ವಿಚಾರಣೆಯಲ್ಲಿ ಸಂತೋಷ ಒಪ್ಪಿಕೊಂಡಿರುವುದಾಗಿ ವಿಶ್ವಾಸನೀಯ ಮೂಲಗಳು ಖಚಿತಪಡಿಸಿದವು. ಒಟ್ಟಾರೆ ಈ ವರ್ಷದ ಮೊದಲ ದಿನ ದೇಶಾದ್ಯಂತ ಗಮನ ಸೆಳೆದಿದ್ದ ಬ್ಯಾನರ್ ಗಲಾಟೆ ಹಾಗೂ ಕೆಐಎಡಿಬಿ ವಂಚನೆ ಸೇರಿ ಎರಡು ಪ್ರಕರಣವನ್ನು ಸಿಐಡಿ ವಿಚಾರಣೆ ನಡೆಸುತ್ತಿದೆ. ಬ್ಯಾನರ್ ಗಲಾಟೆ ಪ್ರಕರಣ ವಹಿಸಿಕೊಂಡು ಮೂರು ತಿಂಗಳು ಕಳೆಯುತ್ತಾ ಬಂದರೂ ಈವರೆಗೂ ಮಾಹಿತಿಯ ಸುಳಿವು ನೀಡಿಲ್ಲ. ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಬೆಂಬಲಿತರೇ ಆರೋಪಿಗಳು ಆಗಿರುವುದರಿಂದ ಪಕ್ಷಕ್ಕೆ ಮುಜುಗರ ದೃಷ್ಠಿಯಿಂದ ಮಾಹಿತಿ ನೀಡುತ್ತಿಲ್ಲ. ಇನ್ನೂ ಕೆಐಎಡಿಬಿ ಪ್ರಕರಣ ಮೇಲಧಿಕಾರಿಗಳೇ ಭಾಗಿಯಾಗಿರುವುದರಿಂದ ತಪ್ಪಿಸ್ತರ ಮೇಲೆ ಶಿಕ್ಷೆಯಾಗಲಿದೆಯೇ ಎಂಬುದು ಕಾದು ನೋಡಬೇಕಿದೆ.
ಆರೋಪಿ ಶಾಸಕ ಸ್ಥಾನಕ್ಕೆ ಸ್ಪರ್ಧೆ : ಸಂತೋಷ ಕುಮಾರ್ ಕೆಆರ್‌ಎಸ್ ಪಕ್ಷದ ಜಿಲ್ಲಾ ಪರಿಶಿಷ್ಟ ವಿಭಾಗದ ಜಿಲ್ಲಾಧ್ಯಕ್ಷನಾಗಿದ್ದ. ಇದಲ್ಲದೆ, 2023ನೇ ವಿಧಾನಸಭೆ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕೆಆರ್‌ಎಸ್ ಪಕ್ಷದಿಂದ ಸ್ಪರ್ಧಿಸಿ 181 ಮತಗಳು ಪಡೆದು ಪರಾಜಿತಗೊಂಡಿದ್ದ. ಪಕ್ಷದ ಕಾರ್ಯಕ್ರಮಗಳಿಗೆ 10 ಲಕ್ಷ ರೂ. ಖರ್ಚು ಮಾಡಿದ್ದೆ ಎಂಬುದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ.
ಕೋಟ್... ಹದಿನೈದು ಕೋಟಿ ರೂ. ಗಿಂತ ಅಧಿಕ ವಂಚನೆ ಪ್ರಕರಣ ಆಗಿರುವುದರಿಂದ ಸರ್ಕಾರದ ನಿಯಮದಂತೆ ಏ.23ರಂದು ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.
- ಡಾ.ಸುಮನ್ ಡಿ.ಪನ್ನೇಕರ್, ಎಸ್ಪಿ, ಬಳ್ಳಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net