ಕಂಪ್ಲಿ: ಮೂಲದಲ್ಲಿಯೇ ಕಸ ವಿಂಗಡಿಸಿ ಕಸದ ವಾಹನಕ್ಕೆ ನೀಡಿದರೆ ಪಟ್ಟಣದ ಸ್ವಚ್ಛತೆ ಕಾಪಾಡಬಹುದು ಎಂದು ಪುರಸಭೆ ಸಮುದಾಯ ಸಂಚಾಲಕಿ ಸಿ.ಜಾನಕಿ ಹೇಳಿದರು. ಪಟ್ಟಣದ 20ನೇ ವಾರ್ಡ್‌ನಲ್ಲಿ ಘನ ತ್ಯಾಜ್ಯ ವಿಲೇವಾರಿ ನಿಯಮ ಕಡ್ಡಾಯ ಜಾರಿ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಮೂಲದಲ್ಲಿಯೇ ಕಸ ವಿಂಗಡಣೆ ಜಾಗೃತಿ ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಸಿ, ಒಣ, ಸ್ಯಾನಿಟರಿ ತ್ಯಾಜ್ಯ, ವಿಶೇಷ ತ್ಯಾಜ್ಯಗಳನ್ನು ವಿಂಗಡಿಸಿ ಕಸದ ವಾಹನಕ್ಕೆ ನೀಡಬೇಕು ಎಂದರು. ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ್‌ಬಾಬು, ಸಮುದಾಯ ಸಂಚಾಲಕರಾದ ಗೌಡರ ನಾಗರತ್ನಾ, ತಿಮ್ಮಮ್ಮ, ಭೂಮಿಕಾ, ಜೀವನ್‌ಸ್ವಾಮಿ ಇತರರಿದ್ದರು.