ಘಟಕಗಳ ಮೇಲೆ ನಿಗಾವಹಿಸಿ

ಬಳ್ಳಾರಿ ತಾಲೂಕಿನ ಕುಡತಿನಿ ಬಿಟಿಪಿಎಸ್ ಘಟಕಕ್ಕೆ ಕೆಪಿಸಿ ಎಂಡಿ ರಾಜೇಂದ್ರ ಚೋಳನ್ ಭೇಟಿ ನೀಡಿದರು. ಬಿಟಿಪಿಎಸ್ ಇಡಿ ಕೆ.ಆರ್.ಗಂಗಾಧರಯ್ಯ, ಅಧಿಕಾರಿಗಳಾದ ಕೆ.ಎಸ್.ರಮೇಶ, ಅಶೋಕ ಕುಮಾರ್ ಎಚ್., ನರೇಂದ್ರರಾವ್ ಕುಲಕರ್ಣಿ, ಬಿ.ಎಂ.ಮಲ್ಲಿಕಾರ್ಜುನ ಇತರರಿದ್ದರು.
ಬಳ್ಳಾರಿ ತಾಲೂಕಿನ ಕುಡತಿನಿ ಬಿಟಿಪಿಎಸ್ ಘಟಕಕ್ಕೆ ಕೆಪಿಸಿ ಎಂಡಿ ರಾಜೇಂದ್ರ ಚೋಳನ್ ಭೇಟಿ ನೀಡಿದರು. ಬಿಟಿಪಿಎಸ್ ಇಡಿ ಕೆ.ಆರ್.ಗಂಗಾಧರಯ್ಯ, ಅಧಿಕಾರಿಗಳಾದ ಕೆ.ಎಸ್.ರಮೇಶ, ಅಶೋಕ ಕುಮಾರ್ ಎಚ್., ನರೇಂದ್ರರಾವ್ ಕುಲಕರ್ಣಿ, ಬಿ.ಎಂ.ಮಲ್ಲಿಕಾರ್ಜುನ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಘಟಕಗಳ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು
ಬಳ್ಳಾರಿ : ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಜಲವಿದ್ಯುತ್ ಉತ್ಪಾದನೆ ಕುಂಠಿತಗೊಂಡಿರುವ ಹಿನ್ನೆಲೆ, ಶಾಖೋತ್ಪನ್ನ ವಿದ್ಯುತ್ ಘಟಕಗಳ ಮೇಲೆ ಅವಲಂಬನೆ ಹೆಚ್ಚಲಿದೆ ಎಂದು ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ವ್ಯವಸ್ಥಾಪಕ ನಿರ್ದೇಶಕ(ಎಂಡಿ) ರಾಜೇಂದ್ರ ಚೋಳನ್ ಹೇಳಿದರು.
ತಾಲೂಕಿನ ಕುಡತಿನಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಬಿಟಿಪಿಎಸ್)ನಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಸದ್ಯ ಬಿಟಿಪಿಎಸ್‌ನ ಮೂರೂ ಯೂನಿಟ್‌ಗಳಿಂದ ವಿದ್ಯುತ್ ಉತ್ತಮ ರೀತಿಯಲ್ಲಿ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ ಮಳೆ ಕೊರತೆಯಾದಂತೆ ದಿನೇದಿನೆ ವಿದ್ಯುತ್ ಬೇಡಿಕೆ ಹೆಚ್ಚುತ್ತಿರುವುದರಿಂದ ಉತ್ಪಾದನೆಗೆ ಯಾವುದೇ ರೀತಿಯ ಅಡಚಣೆಯಾಗದಂತೆ, ಘಟಕಗಳ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ಒಂದೂವರೆ ವರ್ಷದಿಂದ ಮೂರು ಯೂನಿಟ್‌ಗಳಲ್ಲಿ ನಡೆದಿರುವ ವಿದ್ಯುತ್ ಉತ್ಪಾದನೆಯ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬುಧವಾರ ಬೆಳಗ್ಗೆ ಮೂರೂ ಯೂನಿಟ್‌ಗಳಿಗೆ ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ರಾಜೇಂದ್ರ ಚೋಳನ್ ಅವರು, ಘಟಕಗಳಿಗೆ ಅಗತ್ಯವಿರುವ ನೀರು ಹಾಗೂ ಕಲ್ಲಿದ್ದಲು ಪೂರೈಕೆಯ ವ್ಯವಸ್ಥೆ ವೀಕ್ಷಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net