ಹಕ್ಕಂಡಿಯಲ್ಲಿ ಕಾರ್ಣಿಕೋತ್ಸವ ಅದ್ದೂರಿ

ಹಕ್ಕಂಡಿ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ಅದ್ದೂರಿಯಾಗಿ ಜರುಗಿತು.
ಹಕ್ಕಂಡಿ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ಅದ್ದೂರಿಯಾಗಿ ಜರುಗಿತು.
Published on
ಹೂವಿನಹಡಗಲಿ: ಹೊಸ್ತಿಲ ಹುಣ್ಣಿಮೆ ಅಂಗವಾಗಿ ಹಕ್ಕಂಡಿ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ಗುರುವಾರ ಜರುಗಿತು.
ಬೆಳಗ್ಗೆಯಿಂದ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ನಂತರ ಗೊರವಯ್ಯಗಳು ಸರಪಳಿ ಪವಾಡ ಮಾಡಿದರು. ಗ್ರಾಮದ ಮರಡಿ ಭಾಗದಲ್ಲಿ ಕಾರ್ಣಿಕದ ಗೊರವಯ್ಯ ಚಂದ್ರಪ್ಪ ಬಿಲ್ಲನೇರಿ ಸದ್ದಲೇ ಎಂದು ಕೂಗಿ ‘ಮಳೆ ಬೆಳೆ ಹಂಬಲಿಸಿತಲೇ ಮೊಗ್ಗು ಅರಳಿ ಹೂವ್ವಾಯ್ತಲೇ ಪರಾಕ್’ ಎಂದು ಕಾರ್ಣಿಕ ನುಡಿದರು. ಭವಿಷ್ಯವಾಣಿಯಂತೆ ಈ ಬಾರಿ ಮಳೆ ಚೆನ್ನಾಗಿ ಆಗುವ ಮೂಲಕ ಬೆಳೆಗಳು ರೈತರಿಗೆ ದಕ್ಕುತ್ತವೆ ಹಾಗೂ ಅತಂತ್ರ ರಾಜಕೀಯ ಸೃಷ್ಟಿಯಾಗಲಿದೆ ಎಂದು ವಿಶ್ಲೇಷಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net