ಕೆಎಂಇಆರ್‌ಸಿ ನಿಧಿ ಸಮರ್ಪಕ ಬಳಕೆಯಿಲ್ಲ

ಜೆ.ಎನ್.ಗಣೇಶ್
ಜೆ.ಎನ್.ಗಣೇಶ್
Published on

ಪ್ರಮುಖ ಮುಖ್ಯಾಂಶಗಳು

  • ಕೆಎಂಇಆರ್‌ಸಿ ನಿಧಿ

ಕೆಎಂಇಆರ್‌ಸಿ ನಿಧಿ ಸಮರ್ಪಕ ಬಳಕೆಯಿಲ್ಲ

ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅಸಮಾಧಾನ

ಕಂಪ್ಲಿ: ಕೆಎಂಇಆರ್‌ಸಿಯಲ್ಲಿ ಐದು ಸಾವಿರ ಕೋಟಿ ರೂಪಾಯಿಯಿದ್ದು, ಸಮರ್ಥವಾಗಿ ಬಳಸುವ ಜಿಲ್ಲಾಧಿಕಾರಿಗಳಿಲ್ಲ ಎಂದು ಶಾಸಕ ಜೆ.ಎನ್.ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಮಂಡಲ ಅಧಿವೇಶದನದಲ್ಲಿ ಮಂಗಳವಾರ ಮಾತನಾಡಿ, ಕೆಎಂಇಆರ್‌ಸಿ ನಿಧಿಯನ್ನು ಸಮರ್ಪಕವಾಗಿ ಬಳಸುವ ಇಚ್ಛಾಶಕ್ತಿ ಕೊರತೆಯಿದೆ. ಕಾರ್ಖಾನೆ, ಕೃಷಿ, ಚರಂಡಿ, ರಾಸಾಯನಿಕ ತ್ಯಾಜ್ಯ ಸೇರಿ ತುಂಗಭದ್ರಾ ನದಿ ಕಲುಷಿತಗೊಳ್ಳುವುದನ್ನು ತಡೆಯಲು ಮೂಲದಲ್ಲಿಯೇ ನೀರನ್ನು ಸಂಸ್ಕರಿಸಿ ನದಿಗೆ ಸೇರಿಸುವ ಯೋಜನೆ ರೂಪಿಸುವಂತೆ ಒತ್ತಾಯಿಸಿದರು.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಎರಡನೇ ಬೆಳೆಗೆ ನೀರಿಲ್ಲದಿದ್ದರೂ, ಮುಂದಿನ ಬೆಳೆಗೆ ನೀರೊದಗಿಸುವಲ್ಲಿ ಸಿಎಂ, ಡಿಸಿಎಂ ಕಾಳಜಿ ತೋರುತ್ತಾರೆ. ಅಲ್ಲದೆ, ಜಲಾಶಯದ ಗೇಟ್ ಕೂಡಿಸುವಲ್ಲಿ ವಿಪಕ್ಷಗಳು ಸಹಕಾರ ನೀಡಬೇಕೆಂದರು.ರಾಜ್ಯದ ಇಂಜಿನಿಯರ್‌ಗಳು ಜಲಾಶಯದ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅಸಹಾಯಕರಾಗಿದ್ದಾರೆ. ನದಿಗೆ 100 ಟಿಎಂಸಿ ನೀರು ಹರಿದು ಹೋಗುವಾಗ ಇಂಡೆಂಟ್ ಹಾಕದೆ ಫೆಬ್ರವರಿ ನಂತರ ನೀರಿಗಾಗಿ ಇಂಡೆಂಟ್ ಹಾಕುವ ಮೂಲಕ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆ ರೈತರಿಗೆ ನೀರಿನ ತೊಂದರೆ ಸೃಷ್ಟಿಸಿದ್ದಾರೆ ಎಂದು ದೂರಿದರು.
ರೈತರ ನೀರಿನ ಸ್ವಾವಲಂಬನೆಗೆ ನವಲಿ ಸಮನಾಂತರ ಜಲಾಶಯ ನಿರ್ಮಿಸಬೇಕು. ಆಲಮಟ್ಟಿ ಜಲಾಶಯದಿಂದ ನೆಲಗಾಲುವೆ ಮೂಲಕ ನೀರು ತರಬೇಕು. ವಿತರಣಾ ನಾಲೆಗಳಿಗೆ ಒದಗಿಸುವ ನೀರಿನ ಇಂಡೆಂಟ್ ಪರಿಷ್ಕರಿಸಿ ಹೆಚ್ಚಿನ ಪ್ರಮಾಣದ ನೀರು ಹರಿಸಬೇಕೆಂದು ಒತ್ತಾಯಿಸಿದರು.
ಹೊಲಕ್ಕೊಂದು ಕೆರೆ ಯೋಜನೆ ಅನುಷ್ಠಾನಗೊಳಿಸಿ ರೈತರಿಗೆ ನೀರಿನ ಅನುಕೂಲ ಒದಗಿಸಬೇಕು. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಕಂಪ್ಲಿ ಇಲ್ಲವೇ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು. ಬೃಹತ್ ಕೈಗಾರಿಕೆಗಳಲ್ಲಿ ಜಿಲ್ಲೆಯ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲವೆಂದು ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net