ಕರಿಯಮ್ಮದೇವಿ ದೇವಸ್ಥಾನದ ಕಳಸಾರೋಹಣ

ಕರಿಯಮ್ಮದೇವಿ ದೇವಸ್ಥಾನ.
ಕರಿಯಮ್ಮದೇವಿ ದೇವಸ್ಥಾನ.
Published on

ಪ್ರಮುಖ ಮುಖ್ಯಾಂಶಗಳು

  • ಧಾರ್ಮಿಕ
  • ಕಾರ್ಯಗಳು
  • ದೇವಸ್ಥಾನದ
ಕೊಟ್ಟೂರು: ತಾಲೂಕಿನ ಹರಾಳು ಗ್ರಾಮದ ಆರಾಧ್ಯ ದೈವ ಕರಿಯಮ್ಮದೇವಿ ದೇವಸ್ಥಾನದ ಕಳಸಾರೋಹಣ ಹಾಗೂ ನೂತನ ಕರಿಗಲ್ಲು ಪ್ರತಿಷ್ಠಾಪನಾ ಮಹೋತ್ಸವವು ಏ.2 ಮತ್ತು 3ರಂದು ವೈಭವದಿಂದ ಜರುಗಲಿದೆ.
ಏ.2ರಂದು ಉಜ್ಜಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡಪಲ್ಲಕಿ ಉತ್ಸವ ಹಾಗೂ ಧರ್ಮಸಭೆ ನಡೆಯಲಿದೆ. ಏ.3ರ ಬೆಳಗ್ಗೆ ಉಜ್ಜಿನಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ದೇವಸ್ಥಾನದ ಕಳಸಾರೋಹಣ ಹಾಗೂ ಕರಿಗಲ್ಲು ಪ್ರತಿಷ್ಠಾಪನಾ ವಿಧಿವಿಧಾನಗಳು ನೆರವೇರಲಿವೆ. ಮಧ್ಯಾಹ್ನ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಂದ ಧಾರ್ಮಿಕ ಪ್ರವಚನ ನಡೆಯಲಿದೆ.
ಶಾಸಕ ನೇಮಿರಾಜ ನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಜ್ಜಿನಿ ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ್, ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ ಸೇರಿದಂತೆ ಶಿವಾಚಾರ್ಯರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ಲೇಖಕ ಭೀಮಣ್ಣ ಗಜಾಪುರ ರಚನೆಯ ಹರಾಳು ಕರಿಯಮ್ಮ ದೇವಿಯ ಪ್ರಥಮ ಧ್ವನಿ ಸುರುಳಿ ಬಿಡುಗಡೆಯಾಗಲಿದೆ. ಏ.4ರ ರಾತ್ರಿ ನ್ಯಾಯಕ್ಕಾಗಿ ಸಿಡಿದೆದ್ದ ನಾಗಾರ್ಜುನ ಅರ್ಥಾತ್ ಧನರಾಜನ ದರ್ಪ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net