ಪ್ರಜಾಪ್ರಭುತ್ವ ಬಲವರ್ಧನೆಗೆ ಪತ್ರಿಕೋದ್ಯಮವೇ ಅಸ್ತ್ರ

ಎಚ್. ವೀರಾಪುರದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನ, ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಪುರತಗೇರಿ ಕೈಲಾಸ ಲಿಂಗ ಶಿವಾಚಾರ್ಯರು ಉದ್ಘಾಟಿಸಿದರು. ಜ್ಞಾನಜ್ಯೋತಿ ಶಿವಲಿಂಗ ಮಂದಿರದ ಜಡೇಶ ತಾತ, ಕನಿಪ ಸಂಘದ ಜಿಲ್ಲಾ ಕಾರ್ಯದರ್ಶಿ ದ್ಯಾಮನಗೌಡ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಜಿ. ಚಂದ್ರಶೇಖರ ಗೌಡ, ಉಪ್ಪರ ರಮೇಶ, ತಾಲೂಕು ಅಧ್ಯಕ್ಷ ಬಸಯ್ಯಸ್ವಾಮಿ, ಪ್ರಮುಖರಾದ ಬಿ. ಸದಾಶಿವಪ್ಪ ಧಣಿ, ಎಚ್.ಎಂ. ಮಂಜುನಾಥ ಸ್ವಾಮಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪುರತಗೇರಿ ಕೈಲಾಸಲಿಂಗ ಶಿವಾಚಾರ್ಯ ಅನಿಸಿಕೆ
ಕುರುಗೋಡು: ಸಮಾಜ ಮತ್ತು ಆಡಳಿತ ವರ್ಗದ ನಡುವೆ ಸೇತುವೆಯಾಗಿ ಕರ್ತವ್ಯ ನಿರ್ವಾಹಿಸುವ ಪತ್ರಕರ್ತರ ಸೇವೆ ಅನನ್ಯ ಎಂದು ಪುರತಗೇರಿಯ ಕೈಲಾಸಲಿಂಗ ಶಿವಾಚಾರ್ಯರು ಹೇಳಿದರು.
ತಾಲೂಕಿನ ಎಚ್. ವೀರಾಪುರ ಗ್ರಾಮದ ಜ್ಞಾನಜ್ಯೋತಿ ಶಿವಲಿಂಗ ಮಂದಿರದಲ್ಲಿ ಗುರುವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಕರ್ತರ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಪತ್ರಕರ್ತರು ಜನಸಾಮಾನ್ಯರ ಸಮಸ್ಯೆಯನ್ನು ಬೆಳಕಿಗೆ ತರುವ ಜತೆಗೆ ಸಮಾಜ ತಿದ್ದುವ ಕಾರ್ಯ ನಿರ್ವಹಿಸುತ್ತಾರೆ. ಸತ್ಯ, ನಿಷ್ಪಕ್ಷಪಾತತೆ ಮತ್ತು ಸಾಮಾಜಿಕ ಕಾಳಜಿಯಿಂದ ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ಬಲವರ್ಧನೆಗೆ ಪ್ರಮುಖ ಅಸ್ತ್ರವಾಗಿದೆ ಎಂದರು.
ಪತ್ರಕರ್ತ ಶಿವಕುಮಾರ ಬೆನ್ನೂರು ಮಾತನಾಡಿ, ಆಧುನಿಕ ಯುಗದಲ್ಲಿ ಪತ್ರಕರ್ತರು ವೃತ್ತಿಪರ ಒತ್ತಡ, ಸುಳ್ಳು ಸುದ್ದಿಗಳ ಹಾವಳಿ ಹಾಗೂ ವಿವಿಧ ರೀತಿಯ ಸವಾಲು ಎದುರಿಸುತ್ತಿದ್ದರೂ ಸಮಾಜದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕಾ ಸ್ವಾತಂತ್ರ್ಯ, ಸಾಮಾಜಿಕ ಜವಾಬ್ದಾರಿ ಹಾಗೂ ನೈತಿಕ ಮೌಲ್ಯ ಉಳಿಸಿಕೊಂಡು ಪತ್ರಿಕೋದ್ಯಮವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ರೋಹಿತ, ದೇವೇಂದ್ರಪ್ಪ ಮಣ್ಣೂರು, ದೇವೇಂದ್ರಪ್ಪ, ಜೋಗತಿ ರೇಣುಕಾ, ಬಸವರಾಜ, ಪ್ರಕಾಶ್ ಯಲ್ಲಾಪುರ, ಅರಳಿ ಕುಮಾರಸ್ವಾಮಿ, ಭರತ್ ಕುಮಾರ, ಹುಸೇನ್ ಸಾಬ್ ಇವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net