ಚಿಕ್ಕಜೋಗಿಹಳ್ಳಿ ಜವಾಹರ್ ನವೋದಯ ವಿದ್ಯಾಲಯದಿಂದ ಆಯೊಜಿಸಿದ್ದ ಭ್ರಷ್ಟಾಚಾರ ವಿಮುಕ್ತ ಸಮಾಜದ ಪರಿಕಲ್ಪನೆಗಾಗಿ ಜಾಗೃತ ಸಪ್ತಾಹ ರ‌್ಯಾಲಿಗೆ ಪ್ರಾಚಾರ್ಯ ಸುದೇಶ್ ಗೋಪಾಲ್ ಮಲಾಜುರೇ ಚಾಲನೆ ನೀಡಿದರು. ಉಪಪ್ರಾಚಾರ್ಯ ಯು.ಎಸ್.ಬಳ್ಳಾರಿ, ಸಂಗೀತ ಶಿಕ್ಷಕ ಚಂದ್ರಕಾಂತ ಇನಾಮದಾರ, ದೈಹಿಕ ಶಿಕ್ಷಕಿ ಮೃದುಲ ಮೋಹನ್ ಇದ್ದರು.
ಕಾನಹೊಸಹಳ್ಳಿ: ಪ್ರಸುತ್ತ ಸಮಾಜದಲ್ಲಿ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷಾಚಾರದ ಪಿಡುಗು ಹೆಚ್ಚಾಗಿದ್ದು, ಅದರ ನಿಮೂರ್ಲನೆಗಾಗಿ ಸಾರ್ವಜನಿಕರು ಕೈಜೋಡಿಸಬೇಕೆಂದು ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯ ಸುದೇಶ್ ಗೋಪಾಲ್ ಮಲಾಜುರೇ ತಿಳಿಸಿದರು.
ಚಿಕ್ಕಜೋಗಿಹಳ್ಳಿ ಪಿಎಂಶ್ರೀ ಜವಾಹರ್ ನವೋದಯ ವಿದ್ಯಾಲಯದಿಂದ ಶುಕ್ರವಾರ ಭ್ರಷ್ಟಾಚಾರ ವಿಮುಕ್ತ ಸಮಾಜದ ಪರಿಕಲ್ಪನೆಗಾಗಿ ಜಾಗೃತ ಸಪ್ತಾಹ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿದ್ದ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಧ್ವನಿ ಎತ್ತಲಿ
ಭ್ರಷ್ಟಾಚಾರ ನಿರ್ಮೂಲನೆ ಮಾಡದಿದ್ದರೆ ಸಶಕ್ತ ಭಾರತ ಕಟ್ಟಲು ಸಾಧ್ಯವಿಲ್ಲ. ಅದನ್ನು ಬುಡ ಸಮೇತ ಕಿತ್ತೆಸೆಯಬೇಕು. ಹಾಗಾಗಿ ಈ ಹೋರಾಟಕ್ಕೆ ಸಾರ್ವಜನಿಕರ ಸಹಕಾರ ಇರಬೇಕು. ಸರ್ಕಾರಿ ಕಚೇರಿಗಳಿಗೆ ತೆರಳುವ ಸಾರ್ವಜನಿಕರು ಕೆಲಸಗಳಿಗಾಗಿ ಅಧಿಕಾರಿಗಳಿಗೆ ಲಂಚ ನೀಡುವುದನ್ನು ಕೈಬಿಡಬೇಕು. ಅದರ ವಿರುದ್ದ ಧ್ವನಿ ಎತ್ತಬೇಕೆಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ವಿದ್ಯಾರ್ಥಿಗಳು ಸೇರಿ ರ‌್ಯಾಲಿ ಮೂಲಕ ಗ್ರಾಪಂ ಕಚೇರಿಗೆ ತೆರಳಿ ಕಾರ್ಯದರ್ಶಿ ಯು.ಎಂ.ಪ್ರಕಾಶಗೆ ನಂತರ ಅಂಚೆ ಕಚೇರಿ, ಆಸ್ಪತ್ರೆ, ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಉಪಪ್ರಚಾರ್ಯ ಯು.ಎಸ್.ಬಳ್ಳಾರಿ, ಸಂಗೀತ ಶಿಕ್ಷಕ ಚಂದ್ರಕಾಂತ ಇನಾಮದಾರ, ದೈಹಿಕ ಶಿಕ್ಷಣ ಶಿಕ್ಷಕಿ ಮೃದುಲ ಮೋಹನ್, ಶಿಕ್ಷಕರಾದ ಪಿ.ದಿವ್ಯಾ, ಮೊನಾಲ್‌ರಾಜ್, ವೆಂಕಟೇಶ್ವರಲು, ಗಣೇಶ್‌ಬಾಬು, ಕಿರಣ್, ವಿದ್ಯಾರ್ಥಿಗಳಿದ್ದರು.