ವಿಜಯನಗರ ಸಾಮ್ರಾಜ್ಯದ ಅರಸ ಎರಡನೇ ಹರಿಹರನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ. ಶಾಸನದ ಪ್ರಕಾರ ವಿಜಯನಗರದ ಚಿಕ್ಕೊಡೆಯರಂಗಡಿ ಬಸದಿಯಲ್ಲಿದ್ದ 17ನೇ ಜೈನ ತೀಥರ್ಂಕರ ಕುಂಥುನಾಥರ ಹೆಸರಿನಲ್ಲಿ ಅಂತಾಪುರದಲ್ಲಿನ 12 ಕೊಳಗ ಬೀಜ ಬಿತ್ತಬಹುದಾದಷ್ಟು ಭೂಮಿಯನ್ನು ತೆರಿಗೆ ವಿನಾಯಿತಿಯೊಂದಿಗೆ ಜೈನ ಬಸದಿಗೆ ದಾನವಾಗಿ ನೀಡಲಾಗಿದೆ. ಶಾಸನದ ಎಡಭಾಗದಲ್ಲಿ ಸೂರ್ಯ, ಬಲಭಾಗದಲ್ಲಿ ಚಂದ್ರ ಹಾಗೂ ಮಧ್ಯದಲ್ಲಿ ಮುಕ್ಕೊಡೆಯ ಕೆಳಗೆ ಪದ್ಮಾಸನದಲ್ಲಿ ಆಸೀನರಾಗಿರುವ ಜೀನಮೂರ್ತಿಯ ಶಿಲ್ಪವಿದೆ. ಶಾಸನದಲ್ಲಿ 13 ಸಾಲುಗಳಿದ್ದು, ಕನ್ನಡದಲ್ಲಿ ಕೆತ್ತಲಾಗಿದೆ.