ಜೈಲಿನಲ್ಲಿ ದಾಳಿ, ಆರು ಮೊಬೈಲ್ ಪತ್ತೆ

ಜೈಲಿನಲ್ಲಿ ದಾಳಿ, ಆರು ಮೊಬೈಲ್ ಪತ್ತೆ
ಜೈಲಿನಲ್ಲಿ ದಾಳಿ, ಆರು ಮೊಬೈಲ್ ಪತ್ತೆ
Published on

ಪ್ರಮುಖ ಮುಖ್ಯಾಂಶಗಳು

  • ಕಾರಾಗೃಹ
  • ಅಧಿಕಾರಿ
  • ಅಧೀಕ್ಷಕಿ
ಬಳ್ಳಾರಿ : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಅನಿರೀಕ್ಷಿತವಾಗಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಆರು ಕೀ-ಪ್ಯಾಡ್ ಮೊಬೈಲ್, ಎರಡು ಚಾರ್ಜರ್ ಪತ್ತೆಯಾಗಿವೆ ಎಂದು ಕಾರಾಗೃಹದ ಅಧೀಕ್ಷಕಿ ಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರಾಗೃಹ ಸುಧಾರಣಾ ಸಂಕಲ್ಪ ಅಭಿಯಾನದಡಿ ಶನಿವಾರ ರಾತ್ರಿ ದಾಳಿ ನಡೆಸಲಾಗಿತ್ತು. ಜೈಲಿನೊಳಗೆ ಸಾಗಿಸಿದವರು ಹಾಗೂ ನಿಷೇಧಿತ ವಸ್ತುಗಳನ್ನು ಉಪಯೋಗಿಸಿದವರ ವಿರುದ್ಧ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net