ದೇವಸಮುದ್ರ ಕ್ರಾಸ್ ಗೋಶಾಲೆ ಆವರಣದಲ್ಲಿ ಗೋಮಾತೆಯ ವೈಭವ ಕುರಿತು ವಿಜಯನಗರದ ಗಮಕ ಕಲಾ ಪರಿಷತ್ ಅಧ್ಯಕ್ಷೆ ಪಲ್ಲವಿ ಆರ್.ಭಟ್ ಗಮಕ ಹಾಗೂ ಉಪಾಧ್ಯಕ್ಷೆ ವಿದ್ಯಾಶ್ರೀ ಸಿದ್ಧೇಶ ವ್ಯಾಖ್ಯಾನ ಪ್ರಸ್ತುತಪಡಿಸಿದರು.
ಕಂಪ್ಲಿ: ಸಾವಯವ ಕೃಷಿಗೆ ಹಿಂದಿರುಗದಿದ್ದರೆ ಮನುಷ್ಯ ಕುಲಕ್ಕೆ ಉಳಿಗಾಲ ಇಲ್ಲ ಎಂದು ಶ್ರೀ ಕಲ್ಯಾಣಚೌಕಿಮಠದ ಕೆ.ಎಂ.ಚನ್ನಮಲ್ಲಯ್ಯಶಾಸ್ತ್ರಿ ಹೇಳಿದರು.
ದೇವಸಮುದ್ರ ಕ್ರಾಸ್‌ನಲ್ಲಿರುವ ಗೋಶಾಲೆ ಆವರಣದಲ್ಲಿ ಆಯೋಜಿಸಿದ್ದ ಸಾವಯವ ಕೃಷಿ ಮತ್ತು ರೈತರಿಗಾಗಿ ಚರ್ಚಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು. ಆಹಾರ, ಗಾಳಿ, ನೀರು, ವಾತಾವರಣ ಸಂಪೂರ್ಣ ಕಲುಷಿತಗೊಂಡಿರುವುದು ಗಂಡಾಂತರಕಾರಿಯಾಗಿದೆ. ರಾಸಾಯನಿಕ ಮುಕ್ತ ಸಂಕೋಲೆಗಳಿಂದ ವಿಮುಖರಾಗಲು ಕಡ್ಡಾಯವಾಗಿ ಸಾವಯವ ಕೃಷಿ, ಗೋ ಸಾಕಣೆ, ಶಾಸ್ತ್ರೀಯ ಜೀವನ ಪದ್ಧತಿ ಅಳವಡಿಕೆ ಅಗತ್ಯ ಎಂದರು.
ಹರಿಹರದ ಶಾಂಭವಿ ಯೋಗರಾಜರ ಮಾರ್ಗದರ್ಶನದಲ್ಲಿ ಕೆ.ವೈ.ಸೃಷ್ಟಿ ಯೋಗ ನೃತ್ಯ ಪ್ರದರ್ಶಿಸಿದರು. ವಿಜಯನಗರದ ಗಮಕ ಕಲಾ ಪರಿಷತ್ ಅಧ್ಯಕ್ಷೆ ಪಲ್ಲವಿ ಆರ್.ಭಟ್ ಗಮಕ ವಾಚನ, ಉಪಾಧ್ಯಕ್ಷೆ ವಿದ್ಯಾಶ್ರೀ ಸಿದ್ಧೇಶ ಕುಮಾರವ್ಯಾಸ ಭಾರತದ ಗೋವರ್ಧನೋದ್ಧಾರ ಕಥಾ ಪ್ರಸಂಗದ ಗೋಮಾತೆ ವೈಭವ, ಸೋಮೇಶ್ವರ ಶತಕ ಕುರಿತು ವ್ಯಾಖ್ಯಾನ ಪ್ರಸ್ತುತಪಡಿಸಿದರು.