ವೈಚಾರಿಕವಾಗಿ ಮುಂದುವರೆದವರು

ಬಳ್ಳಾರಿಯ ಸತ್ಯಂ ಕಾಲೇಜಿನಲ್ಲಿ ಆಯೋಜಿಸಿದ್ದ ದತ್ತಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಎಚ್.ಎಂ.ಬಸವರಾಜ್ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದರಾಮ್ ಕಲ್ಮಠ, ಪ್ರಾಂಶುಪಾಲ ಡಾ.ಅಶ್ವ ರಾಮಾಂಜಿನಯೇ, ದತ್ತಿ ದಾನಿ ನಾಗರಾಜ್ ಅಚ್ಚಪ್ಪ, ಉಪನ್ಯಾಸಕರಾದ ಆಲಂ ಬಾಷ, ಮಂಗಳಗೌರಿ, ಚಾಂದ್ ಪಾಷ್ ಇದ್ದರು

Published on

ಪ್ರಮುಖ ಮುಖ್ಯಾಂಶಗಳು

  • ಅಭಿಪ್ರಾಯ
ಬಳ್ಳಾರಿ : ಹನ್ನೆರಡನೇ ಶತಮಾನದಲ್ಲಿಯೇ ವಚನಕಾರರು ನಮಗಿಂತ ವೈಚಾರಿಕವಾಗಿ ಮುಂದುವರೆದಿದ್ದರು ಎಂದು ಪ್ರೊ.ಗಾಯತ್ರಿ ಭಾವಿಕಟ್ಟಿ ಅಭಿಪ್ರಾಯಪಟ್ಟರು.
ನಗರದ ಸತ್ಯಂ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ದತ್ತಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಕ್ಕ ಮಹಾದೇವಿಯ ಹುಡುಕಾಟವು ಆತ್ಮ ಸಾಕ್ಷಾತ್ಕಾರ ಮತ್ತು ದೈಹಿಕ ಬಂಧನದಿಂದ ಮುಕ್ತಿ, ನಂಬಿ ನಡೆದ ದೈವ ಚನ್ನಮಲ್ಲಿಕಾರ್ಜುನನಲ್ಲಿ ಏಕವಾದ ಗಾಢ ಅನುಭಾವವಾಗಿದೆ. ಲೌಕಿಕ ಜೀವನದ ಆಡಂಬರದ ದಾಂಪತ್ಯ ಮತ್ತು ದೈಹಿಕ ಅಸ್ತಿತ್ವ ತ್ಯಜಿಸಿ ಆತ್ಮವೇ ಪರಮಾತ್ಮನೆಂಬ ಅರಿವಿನೊಂದಿಗೆ ಆಕೆ ದಿಗಂಬರೆಯಾಗಿ ತನ್ನ ಅಸ್ತಿತ್ವದ ಪರಮೋಚ್ಛ ಸ್ಥಿತಿ ತಲುಪಿದ್ದರು ಎಂದರು.
ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಎಚ್.ಎಂ.ಬಸವರಾಜ್ ಮಾತನಾಡಿ, ಅಕ್ಕಮಹಾದೇವಿಯು ಶರಣ ಚಳುವಳಿಯ ಅನರ್ಘ್ಯ ರತ್ನ. ಶರಣರೆಲ್ಲರಿಗೂ ಅಕ್ಕನ ವ್ಯಕ್ತಿತ್ವವು ಪ್ರೇರಣೆ ನೀಡಿದೆ. ಅವರ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದೆ. ಸ್ವತಃ ಅಕ್ಕಮಹಾದೇವಿಯು ರಚಿಸಿದ ವಚನಗಳು ನಿರ್ಭೀತ ನಡೆಯ ಆಕೆಯ ವ್ಯಕ್ತಿತ್ವ ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net