ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವು ಮೂಡಿಸಿ

ಕಂಪ್ಲಿಯಲ್ಲಿ ಆಯೋಜಿಸಿದ್ದ ಕಸಾಪ ದತ್ತಿ ಕಾರ್ಯಕ್ರಮವನ್ನು ವೀರಶೈವ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ ಉದ್ಘಾಟಿಸಿದರು. ಪ್ರಮುಖರಾದ ಷಣ್ಮುಖಪ್ಪ ಚಿತ್ರಗಾರ, ಬಸವರಾಜ ನಾಯಕ, ಸಂಗೀತಾ, ಕೆ.ಎಂ.ವಾಗೀಶ ಪಂಡಿತಾರಾಧ್ಯ, ವಿ.ವಿದ್ಯಾಧರ ಇತರರಿದ್ದರು.
ಕಂಪ್ಲಿಯಲ್ಲಿ ಆಯೋಜಿಸಿದ್ದ ಕಸಾಪ ದತ್ತಿ ಕಾರ್ಯಕ್ರಮವನ್ನು ವೀರಶೈವ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ ಉದ್ಘಾಟಿಸಿದರು. ಪ್ರಮುಖರಾದ ಷಣ್ಮುಖಪ್ಪ ಚಿತ್ರಗಾರ, ಬಸವರಾಜ ನಾಯಕ, ಸಂಗೀತಾ, ಕೆ.ಎಂ.ವಾಗೀಶ ಪಂಡಿತಾರಾಧ್ಯ, ವಿ.ವಿದ್ಯಾಧರ ಇತರರಿದ್ದರು.
Published on
ಕಂಪ್ಲಿ: ಕನ್ನಡ ಸಾಹಿತ್ಯ, ಸಂಸ್ಕೃತಿ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿಗೊಳಿಸುವ ಕಾರ್ಯವಾಗಲಿ ಎಂದು ವೀರಶೈವ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ ಹೇಳಿದರು.
ಪಟ್ಟಣದ ಓದ್ಸೋ ಜಡೆಮ್ಮ ಗುರುಸಿದ್ಧಯ್ಯನವರ ಪ್ರೌಢಶಾಲೆಯಲ್ಲಿ ಕಸಾಪ ತಾಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಲಕ್ಷ್ಮೀದೇವಿ ಮತ್ತು ಭೋಜನಗೌಡ, ಗೋಳ್ನೇರು ಗಂಗಮ್ಮ ಸಿದ್ಧಪ್ಪ ದತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿ ಹಂತದಲ್ಲಿಯೇ ಮಕ್ಕಳಲ್ಲಿ ಸಾಹಿತ್ಯದ ಒಲವು ಮೂಡಿಸುವಲ್ಲಿ ಶಿಕ್ಷಕರು ನಿಗಾ ವಹಿಸಬೇಕು ಎಂದರು.
ಪ್ರಾಚಾರ್ಯ ಬಸವರಾಜ ನಾಯಕ ಅವರು ಅಕ್ಕಮಹಾದೇವಿ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿ, ಧೈರ್ಯ ಮತ್ತು ಆತಂಕರಹಿತ ಜೀವನ ಸಾಗಿಸುವ ಮಾರ್ಗವನ್ನು ಅಕ್ಕಮಹಾದೇವಿ ವಚನಗಳಲ್ಲಿ ಕಾಣಬಹುದಾಗಿದೆ. ಅಕ್ಕಮಹಾದೇವಿ ಜೀವನ ಸಂದೇಶ ಸದಾ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದರು.
ಶಿಕ್ಷಕಿ ಸಂಗೀತಾ ಅವರು ಕನಕದಾಸರ ಜೀವನ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ನೀಡಿ, ಕನಕದಾಸರ ಕೀರ್ತನೆ, ಸುಳಾದಿಗಳು ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆಯಾಗಿವೆ. ಸರ್ವರೂ ಒಗ್ಗೂಡಿ ಬಾಳಬೇಕೆಂಬುದು ಕನಕದಾಸರ ಆಶಯವಾಗಿತ್ತು ಎಂದರು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಸಂಘದ ಪದಾಧಿಕಾರಿಗಳಾದ ಕೆ.ಎಂ.ವಾಗೀಶ ಪಂಡಿತಾರಾಧ್ಯ, ವಿ.ವಿದ್ಯಾಧರ, ಆಡಳಿತಾಧಿಕಾರಿ ಎಂ.ಚಂದ್ರಶೇಖರ, ಕಸಾಪ ಪದಾಧಿಕಾರಿಗಳಾದ ಅಂಬಿಗರ ಮಂಜುನಾಥ, ಎಸ್.ಡಿ.ಬಸವರಾಜ, ಎಸ್.ಶಾಮಸುಂದರಾವ್, ಎಲಿಗಾರ ವೆಂಕಟರೆಡ್ಡಿ, ಶ್ವೇತಾ ಅಕ್ಕಿ, ಅಶೋಕ ಕುಕನೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net