ಜೋಡಿ ನಾಗದೇವರ ಮೂರ್ತಿ ಪ್ರತಿಷ್ಠಾಪನೆ

ಸಿರಗುಪ್ಪದ ಜಯನಗರ ಬಡಾವಣೆಯಲ್ಲಿ ಜೋಡಿ ನಾಗದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಪ್ರಮುಖರಾದ ಬಿ.ಎಂ.ಸತೀಶ, ನರಸಿಂಹ ನಾಯಕ, ವಿರೂಪಾಕ್ಷಪ್ಪ, ವೆಂಕಟೇಶ ಇತರರಿದ್ದರು.
ಸಿರಗುಪ್ಪದ ಜಯನಗರ ಬಡಾವಣೆಯಲ್ಲಿ ಜೋಡಿ ನಾಗದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಪ್ರಮುಖರಾದ ಬಿ.ಎಂ.ಸತೀಶ, ನರಸಿಂಹ ನಾಯಕ, ವಿರೂಪಾಕ್ಷಪ್ಪ, ವೆಂಕಟೇಶ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೂರ್ತಿಗಳಿಗೆ ಜಲಾಧಿವಾಸ

ಸಿರಗುಪ್ಪ: ಜಯನಗರ ಬಡಾವಣೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ಜೋಡಿ ನಾಗದೇವರ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾ-ಭಕ್ತಿಯಿಂದ ಹಾಗೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ದೇವಸ್ಥಾನದಲ್ಲಿ ಗಣಪತಿ ಪೂಜೆ, ಪುಣ್ಯಾಹವಾಚನ, ನವಗ್ರಹ ಹೋಮ, ಮೃತ್ಯುಂಜಯ ಹೋಮ ಹಾಗೂ ವಿಶೇಷ ನಾಗಪ್ರತಿಷ್ಠಾ ಹೋಮ, ನೂತನ ಮೂರ್ತಿಗಳಿಗೆ ಜಲಾಧಿವಾಸ, ಧಾನ್ಯಾಧಿವಾಸ ಮತ್ತು ಅಧಿವಾಸ ಪೂಜೆ ನೇರವೇರಿಸಿದ ನಂತರ ಜೋಡಿ ನಾಗದೇವರ ವಿಗ್ರಹ ಪ್ರತಿಷ್ಠಾಪಿಸಲಾಯಿತು. ಬಳಿಕ ಮೂರ್ತಿಗಳಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net