

ಪ್ರಮುಖ ಮುಖ್ಯಾಂಶಗಳು
ಗೇಟ್‌ಗಳ ತಯಾರಿಕೆ ಹಾಗೂ ಅಳವಡಿಕೆ ಶರವೇಗದಲ್ಲಿ ಸಾಗಿದೆ. ಇಲ್ಲಿವರೆಗೆ 21 ಗೇಟ್‌ಗಳ ತಯಾರಿಕೆ ಪೂರ್ಣವಾಗಿದೆ. ಒಂದು ಗೇಟ್ ಅಳವಡಿಕೆ ಆಗಿದ್ದು, 10ನೇ ಗೇಟ್ ಪ್ರಗತಿಯಲ್ಲಿದೆ. ಉಳಿದ ಗೇಟ್‌ಗಳ ತಯಾರಿಕೆ ನಡೆಯುತ್ತಿದೆ. ಆದಷ್ಟು ಬೇಗ ಪೂರ್ಣ ಆಗಲಿದೆ.
ತುಂಗಭದ್ರಾ ಜಲಾಶಯ ಮಂಡಳಿ ಅಧಿಕಾರಿಗಳು ಗೇಟ್‌ಗಳ ಅಳವಡಿಕೆ ಕಾರ್ಯ ಮುಂದಿನ ಮುಂಗಾರು ಆರಂಭ ಆಗುವ ಮೊದಲು ಪೂರ್ಣಗೊಳಿಸಲಿ. ರೈತರ ವಿಷಯದಲ್ಲಿ ರಾಜಕೀಯ ಮಾಡದೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಪರವಾಗಿ ಕೆಲಸ ಮಾಡಲಿ.