ಹಗರಿಬೊಮ್ಮನಹಳ್ಳಿಯಲ್ಲಿ ಕೃಷಿ ಭೂಮಿಗಾಗಿ ನಾವು ಸಂಘಟನೆಯಿಂದ ತಹಸೀಲ್ದಾರ್ ಆರ್.ಕವಿತಾಗೆ ಮನವಿ ಸಲ್ಲಿಸಲಾಯಿತು. ಸಂಘಟನೆ ಸಂಚಾಲಕ ಬುಡ್ಡಿ ಬಸವರಾಜ, ತಾಪಂ ಮಾಜಿ ಸದಸ್ಯ ವೆಂಕಟೇಶ, ಪ್ರಮುಖರಾದ ಲಿಂಗರಾಜ ಯಾದವ್, ಎಂ.ಶಿವಕುಮಾರ ಇತರರಿದ್ದರು.
Published on:
Copied
Follow Us
ಹಗರಿಬೊಮ್ಮನಹಳ್ಳಿ: ತಾಲೂಕಿನ ಕೃಷಿ ಭೂಮಿಯಲ್ಲಿ ಪವನ ವಿದ್ಯುತ್ ಘಟಕ ಸ್ಥಾಪನೆ ವಿರೋಧಿಸಿ ಕೃಷಿ ಭೂಮಿಗಾಗಿ ನಾವು ಸಂಘಟನೆಯಿಂದ ಪಟ್ಟಣದ ಆಡಳಿತ ಸೌಧದ ಮುಂದೆ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್.ಕವಿತಾಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ಸಂಚಾಲಕ ಬುಡ್ಡಿ ಬಸವರಾಜ್ ಮಾತನಾಡಿ, ಕೆಲವು ಖಾಸಗಿ ಕಂಪನಿಗಳು ರೈತರಿಗೆ ಆಮಿಷಗಳನ್ನೊಡ್ಡಿ ಕೃಷಿಗೆ ಯೋಗ್ಯವಾದ ಭೂಮಿಯಲ್ಲಿ ಪವನ ವಿದ್ಯುತ್ ಯಂತ್ರಗಳನ್ನು ಸ್ಥಾಪಿಸಲು ಮುಂದಾಗಿರುವುದು ಖಂಡನೀಯ. ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ರೈತರಿಗೆ ಇದು ಕಂಟಕವಾಗಲಿದೆ. ಜತೆಗೆ ಅಕ್ಕಪಕ್ಕದ ರೈತರ ಬೆಳೆ ಇಳುವರಿಗೆ ತೊಂದರೆಯಾಗಲಿದೆ.
ಭೂಮಿಯ ತೇವಾಂಶ ಕಡಿಮೆಯಾಗಿ ಮುಂಬರುವ ದಿನಗಳಲ್ಲಿ ಕೃಷಿ ನಿಂತುಹೋಗುವ ಸಾಧ್ಯತೆ ಇದೆ. ಆದ್ದರಿಂದ ಘಟಕಗಳ ಸ್ಥಾಪನೆಗೆ ಪರವಾನಿಗೆ ನೀಡಬಾರದು ಎಂದು ಒತ್ತಾಯಿಸಿದರು. ತಾಪಂ ಮಾಜಿ ಸದಸ್ಯ ಕಡಲಬಾಳು ವೆಂಕಟೇಶ್ ಮಾತನಾಡಿ, ಇದು ರೈತರಿಗಷ್ಟೇ ತೊಂದರೆ ಅಲ್ಲ ಪ್ರಾಣಿ-ಪಕ್ಷಿಗಳ ಜೀವ ಸಂಕೊಲೆಗಳಿಗೆ ಮಾರಕವಾಗಲಿದೆ ಎಂದರು.
ಕುರುಬರ ಸಂಘದ ತಾಲೂಕು ಅಧ್ಯಕ್ಷ ಎಂ.ಶಿವರಾಜ್, ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಲಿಂಗರಾಜ್ ಯಾದವ್, ಪ್ರಮುಖರಾದ ಕೋಡಿಹಳ್ಳಿ ಮಂಜುನಾಥ್, ಪೂಜಾರ್ ಸಿದ್ದಪ್ಪ, ಚಿಲುಗೋಡು ಭೀಮಪ್ಪ, ಎಚ್.ದುರುಗಪ್ಪ, ರಮೇಶ್, ಸಂತೋಷ, ಸೋಮನಾಥ ಭಜಂತ್ರಿ, ಗೋಣೆಪ್ಪ, ಹನುಮಂತು, ಚಂದ್ರು ಇತರರಿದ್ದರು.