ಯುವಜನರಲ್ಲಿ ರಾಷ್ಟ್ರೀಯತೆ ಪ್ರೇರೇಪಿಸಿ

ಕಂಪ್ಲಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲಾಯಿತು.
ಕಂಪ್ಲಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲಾಯಿತು.
Published on
ಕಂಪ್ಲಿ: ಭಾರತವನ್ನು ವಿಶ್ವಗುರುವನ್ನಾಗಿ ರೂಪಿಸುವ ಪ್ರಧಾನಿ ನರೇಂದ್ರಮೋದಿ ಅವರ ಸಂಕಲ್ಪ ಈಡೇರಿಸಲು ಕಾರ್ಯಕರ್ತರು ಕೈಜೋಡಿಸಬೇಕಿದೆ ಎಂದು ಮಾಜಿ ಶಾಸಕ ಟಿ.ಎಚ್.ಸುರೇಶ್‌ಬಾಬು ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿ ಆವರಣದಲ್ಲಿ ಪಕ್ಷದ 46ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಾರ್ಯಕರ್ತರೇ ಬಿಜೆಪಿಯ ಪ್ರಚಂಡ ಶಕ್ತಿಯಾಗಿದ್ದು, ರಾಷ್ಟ್ರೀಯತೆಯನ್ನು ಯುವಜನತೆಯಲ್ಲಿ ಪ್ರೇರೇಪಿಸಬೇಕಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತರುವಲ್ಲಿ ಕಾರ್ಯಕರ್ತರು ತಳಮಟ್ಟದಿಂದ ಶ್ರಮಿಸಬೇಕಿದೆ. ದೇಶ ನಿರ್ಮಾಣದಲ್ಲಿ ಬಿಜೆಪಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ ಎಂದರು.
ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ, ಪ್ರಮುಖರಾದ ಯರ‌್ರಂಗಳಿ ತಿಮ್ಮಾರೆಡ್ಡಿ, ಅಳ್ಳಳ್ಳಿ ವೀರೇಶ್, ಜಿ.ಶ್ರೀನಿವಾಸುಲು, ಟಿ.ವಿ.ಸುದರ್ಶನರೆಡ್ಡಿ, ಎನ್.ರಾಮಾಂಜನೇಯಲು, ಮಂಜುಳಾ, ಎಲ್.ಪದ್ಮಾವತಿ, ಕೆ.ಬಸವಪ್ರಭು, ಎನ್.ಮನೋಜಗೌಡ, ಪ್ರಶಾಂತ್, ಕಟ್ಟೆ ವಿಶ್ವನಾಥ, ಎಸ್.ಚಂದ್ರಶೇಖರಗೌಡ, ಕರಿಬಸಯ್ಯಸ್ವಾಮಿ, ರಿಯಾಜ್, ಕಟ್ಟೆ ದುರುಗಪ್ಪ, ಹೊನ್ನಳ್ಳಿ ಈರಣ್ಣ, ಮೆಟ್ರಿ ಶಿವಕುಮಾರ್, ಅಶೋಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net