ಯುವ ನಾಯಕತ್ವಕ್ಕೆ ಪ್ರೇರಣೆ-ಮಾರ್ಗದರ್ಶನ

ಗಂಗಾವತಿಯಲ್ಲಿ ಆಯೋಜಿಸಿದ್ದ ಜೆಸಿಐ ಅಲುಮ್ನಿ ಕ್ಲಬ್ ಕಂಪ್ಲಿ ವಲಯದ ಕಾರ್ಯಕ್ರಮವನ್ನು ಪೂರ್ವ ವಲಯ 14ರ ಅಧ್ಯಕ್ಷ ವಸಂತ ಕುಮಾರ್ ಉದ್ಘಾಟಿಸಿದರು.
ಗಂಗಾವತಿಯಲ್ಲಿ ಆಯೋಜಿಸಿದ್ದ ಜೆಸಿಐ ಅಲುಮ್ನಿ ಕ್ಲಬ್ ಕಂಪ್ಲಿ ವಲಯದ ಕಾರ್ಯಕ್ರಮವನ್ನು ಪೂರ್ವ ವಲಯ 14ರ ಅಧ್ಯಕ್ಷ ವಸಂತ ಕುಮಾರ್ ಉದ್ಘಾಟಿಸಿದರು.
Published on
ಕಂಪ್ಲಿ: ಯುವ ನಾಯಕತ್ವವನ್ನು ಜಾಗೃತಿಗೊಳಿಸುವುದಕ್ಕಾಗಿ ಸಮಾಜಮುಖಿ ಕಾರ್ಯಕ್ರಮ ಆಯೋಜನೆಗೆ ಆದ್ಯತೆ ನೀಡಲಾಗುವುದು ಎಂದು ಜೆಸಿಐ ಅಲುಮ್ನಿ ಕ್ಲಬ್ ರೀಜನಲ್ ಚೇರ‌್ಮನ್ ಡಿ.ಮೌನೇಶ್ ಹೇಳಿದರು.
ಗಂಗಾವತಿಯಲ್ಲಿ ಆಯೋಜಿಸಿದ್ದ ಜೆಸಿಐ ಅಲುಮ್ನಿ ಕ್ಲಬ್ ಕಂಪ್ಲಿ ವಲಯದ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಮಾತನಾಡಿದರು. ವ್ಯಕ್ತಿತ್ವ ವಿಕಸನ ಚಟುವಟಿಕೆಗಳಲ್ಲಿ ಜೆಸಿಐ ಸಂಸ್ಥೆ ಮುಂಚೂಣಿಯಲ್ಲಿದ್ದು, ಎಲ್ಲ ವಯೋಮಾನದವರಿಗೂ ಆದರ್ಶಪ್ರಾಯವಾಗಿದೆ. ಜೆಸಿಐ ಕಂಪ್ಲಿಗೆ ನಿರಂತರ ಬೆಂಬಲ ನೀಡುವುದರೊಂದಿಗೆ ಯುವ ನಾಯಕತ್ವ ಪ್ರೇರಣೆಗೆ ಮಾರ್ಗದರ್ಶನ ನೀಡಲಾಗುವುದು. ಸದಸ್ಯರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗೆ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಪೂರ್ವ ವಲಯ 14ರ ಅಧ್ಯಕ್ಷ ವಸಂತ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೋನಲ್ ಚೇರ‌್ಮನ್ ಮಹಾಬಲೇಶ್ವರ್, ವಲಯ ಉಪಾಧ್ಯಕ್ಷ ಪ್ರಸಾದ್ ಗಡಾದ್, ಕೋಶಾಧ್ಯಕ್ಷ ಆರ್.ಶಾಂತಿಲಾಲ್, ಕಾರ್ಯದರ್ಶಿ ರಮೇಶರೆಡ್ಡಿ, ಪ್ರಮುಖರಾದ ಡಿ.ವೀಣಾ, ಚೈತ್ರಾ, ಸುನಿತಾ, ನಿರಂಜನ್ ಗುಪ್ತಾ, ಡಾ.ಜಂಬುನಾಥಗೌಡ, ಡಾ.ಸುಧಾಕರ, ಡಾ.ರಾಮರಾಜು, ಎಸ್.ಎಂ.ನಾಗರಾಜ, ಕೆ.ಎಂ.ವಾಗೀಶ, ರುದ್ರಪ್ಪ, ರಾಘವೇಂದ್ರ, ಡಾ.ಭರತ್, ಮಂಜೇಶ್, ಕಾಂಚನಾ, ಸೌಮ್ಯಾ, ಲಕ್ಷ್ಮೀ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net