ಸುಕ್ರದಪ್ಪನ ಬೆಟ್ಟದಲ್ಲಿ ಶಾಸನ ಪತ್ತೆ

ತೆಕ್ಕಲಕೋಟೆ ಸಮೀಪದ ನಿಟ್ಟೂರು ಗ್ರಾಮದ ಬಳಿಯ ಸುಕ್ರದಪ್ಪನ ಬೆಟ್ಟದಲ್ಲಿ ಅಪ್ರಕಟಿತ ಬಂಡೆಗಲ್ಲು ಶಾಸನ ಪತ್ತೆಯಾಗಿರುವುದು.
ತೆಕ್ಕಲಕೋಟೆ ಸಮೀಪದ ನಿಟ್ಟೂರು ಗ್ರಾಮದ ಬಳಿಯ ಸುಕ್ರದಪ್ಪನ ಬೆಟ್ಟದಲ್ಲಿ ಅಪ್ರಕಟಿತ ಬಂಡೆಗಲ್ಲು ಶಾಸನ ಪತ್ತೆಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚೀನ
  • ಲಿಪಿ
  • ಬರೆಯಲ್ಪಟ್ಟಿದ್ದು
ಸಿರಗುಪ್ಪ: ತೆಕ್ಕಲಕೋಟೆ ಸಮೀಪದ ನಿಟ್ಟೂರು ಗ್ರಾಮದ ಬಳಿಯ ಸುಕ್ರದಪ್ಪನ ಬೆಟ್ಟದಲ್ಲಿ ಬಂಡೆಗಲ್ಲು ಶಾಸನ ಪತ್ತೆಯಾಗಿದೆ. 
ನಿಟ್ಟೂರಿನಲ್ಲಿರುವ ಅಶೋಕನ ಶಿಲಾಶಾಸನ ಪತ್ತೆಯಾಗಿರುವ ಸ್ಥಳದಿಂದ 1ಕಿ.ಮೀ ದೂರದಲ್ಲಿರುವ ಈ ಬಂಡೆಗಲ್ಲು ಶಾಸನವನ್ನು ಸಂಶೋಧನಾ ವಿದ್ಯಾರ್ಥಿಗಳಾದ ಅಶೋಕ್ ಅಬಕಾರಿ, ಮನೋಹರ ಸಿ.ಎಂ ಗುರುತಿಸಿ, ಕ್ಷೇತ್ರ ಅಧ್ಯಯನಕ್ಕೆ ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ ಹಾಗೂ ಹಿರೇಬೆಣಕಲ್ ಮಂಜುನಾಥ ದೊಡ್ಡಮನಿ ಅವರ ಗಮನಕ್ಕೆ ತಂದಿದ್ದಾರೆ. 
ಶಾಸನವು ಬೃಹತ್ ಆಕಾರದ ಬಂಡೆಯೊಂದರ ಮೇಲೆ ಪ್ರಾಚೀನ ಲಿಪಿಯಲ್ಲಿ ಬರೆಯಲ್ಪಟ್ಟಿದ್ದು, ಶಾಸನವು ಏಳು ಸಾಲುಗಳನ್ನು ಒಳಗೊಂಡಿದೆ. ಮೌರ್ಯರ ಆಳ್ವಿಕೆಯನ್ನು ಒಳಗೊಂಡಿರುವ ಪ್ರದೇಶವೆಂದು ಗುರುತಿಸಲಾಗಿತ್ತು ಸದ್ಯ ಪತ್ತೆಯಾಗಿರುವ ಶಾಸನದ ಲಿಪಿಯ ಆಧಾರದಡಿ 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ. 
ಇತಿಹಾಸ ಸಂಶೋಧಕ ಗಂಗಾವತಿಯ ಶರಣಬಸಪ್ಪ ಕೋಲ್ಕರ ಮಾರ್ಗದರ್ಶನದಲ್ಲಿ ಶಾಸನದ ಅಧ್ಯಯನ ನಡೆಸುತ್ತಿದ್ದು, ಶಾಸನದ ಕುರಿತು ಶೀಘ್ರದಲ್ಲಿಯೇ ಮಾಹಿತಿಯನ್ನು ಒದಗಿಸಲಾಗುವುದು ಎಂದು ಲಿಪಿ ತಜ್ಞ ಮಾರುತಿ ಭಜಂತ್ರಿ ತಿಳಿಸಿದ್ದಾರೆ. 
ಶಾಸನ ಪತ್ತೆ ಕಾರ್ಯದಲ್ಲಿ ಸ್ಥಳೀಯ ಇತಿಹಾಸ ಆಸಕ್ತರಾದ ಮಂಜುನಾಥ, ಕಾಡಸಿದ್ದ, ಹೊನ್ನೂರ, ಗಂಗಾವತಿಯ ಹರನಾಯಕ, ಚಂದ್ರಶೇಖರ್ ಕುಂಬಾರ, ಮದ್ದಾನೆಪ್ಪ ಹೊಸಳ್ಳಿ ಭಾಗವಹಿಸಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net