ಗೌರವಧನ ಹೆಚ್ಚಿಸಿ 6ನೇ ಗ್ಯಾರಂಟಿ ಘೋಷಿಸಿ

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ತಾಲೂಕು ಘಟಕದಿಂದ ಮಂಗಳವಾರ ಕೂಡ್ಲಿಗಿ ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ಮನವಿ ಸಲ್ಲಿಸಲಾಯಿತು. ನಿಕಟಪೂರ್ವ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ವೀರಣ್ಣ, ಫೆಡರೇಷನ್ ತಾಲೂಕು ಅಧ್ಯಕ್ಷೆ ಎನ್.ಸುಮಾ, ಗೌರವಾಧ್ಯಕ್ಷೆ ಕೆ.ಪದ್ಮಾವತಿ, ಪ್ರಧಾನ ಕಾರ್ಯದರ್ಶಿ ಎಚ್.ಅನ್ನಪೂರ್ಣಾ, ಉಪಾಧ್ಯಕ್ಷೆ ಕೆ.ಎನ್.ಕವಿತಾ, ಖಜಾಂಚಿ ಜೆ.ಜಯಮಾಲ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರ ಫೆಡರೇಷನ್ ಆಗ್ರಹ

ಕೂಡ್ಲಿಗಿ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗೌರವಧನ ಹೆಚ್ಚಿಸಿ ಆರನೇ ಗ್ಯಾರಂಟಿ ಘೋಷಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಘಟಕ ಮಂಗಳವಾರ ತಹಸೀಲ್ದಾರ್ ವಿ.ಕೆ.ನೇತ್ರಾವತಿ ಮೂಲಕ ಸಿಎಂಗೆ ಮನವಿ ಸಲ್ಲಿಸಿತು.

ನಿಕಟಪೂರ್ವ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ವೀರಣ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಚುನಾವಣಾ ಪ್ರಣಾಳಿಕೆಯ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕಿಯರಿಗೆ 10 ಸಾವಿರ ಗೌರವಧನ ಹೆಚ್ಚಿಸಬೇಕು. ಸುದೀರ್ಘ ಸೇವೆ ಸಲ್ಲಿಸಿ 2011ರಿಂದ ನಿವೃತ್ತಿಯಾದವರಿಗೆ ಗ್ರಾಚ್ಯುಟಿ ಜಾರಿಗೊಳಿಸಬೇಕು. ಈಗಾಗಲೇ ಸ್ವಯಂ ನಿವೃತ್ತಿಯಾಗಿರುವವರಿಗೂ ಗ್ರಾಜ್ಯುಟಿ ನೀಡಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಕೇಂದ್ರಗಳ ಕೆಲಸಗಳ ಜತೆ ಹೆಚ್ಚುವರಿಯಾಗಿ ಬಿಎಲ್‌ಎ ಜವಾಬ್ದಾರಿ ನೀಡುತ್ತಿರುವುದು ನಿಲ್ಲಿಸಬೇಕು. ನಿರಾಕರಿಸಿದ ಕಾರ್ಯಕರ್ತರೆಯರ ವಿರುದ್ಧ ಕ್ರಮ ಜರುಗಿಸಿ ಅಮಾನತು ಗೊಳಿಸುವುದನ್ನು ನಿಲ್ಲಿಸಬೇಕು. ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಅಂಗನವಾಡಿಯಲ್ಲೇ ಮುಂದುವರಿಸಬೇಕು. ಸರ್ಕಾರಿ ನೌಕರರೆಂದು ಪರಿಗಸಬೇಕು ಎಂದು ಒತ್ತಾಯಿಸಿದರು.
ಬಾಕಿ ಗೌರವಧನ ಬಿಡುಗಡೆಗೆ, ಕನಿಷ್ಠ ವೇತನ ಜಾರಿ, ಪ್ರಭಾರ ಭತ್ಯೆ, ತುಟ್ಟಿ ಭತ್ಯೆ ಹೆಚ್ಚಳ, ಋತುಚಕ್ರ ರಜೆ, ಸಂಬಳ ಸಹಿತ ವೈದ್ಯಕೀಯ ರಜೆ, ಬಾಕಿ ಸಾದಿಲ್ವಾರು ಹಣ ಬಿಡುಗಡೆ, ಗುಣಮಟ್ಟದ ಸಮವಸ್ತ್ರ ನೀಡಿಕೆ, ಮೊಟ್ಟೆ ದರ ಹೆಚ್ಚಳ, ತರಕಾರಿ ಖರೀದಿ ಹಣ ಹೆಚ್ಚಳ, ಎಸ್‌ಐಆರ್ ಕರ್ತವ್ಯದಿಂದ ಮುಕ್ತಿ, ಖಾಲಿ ಹುದ್ದೆಗಳ ಭರ್ತಿಗಾಗಿ ಆಗ್ರಹಿಸಿದರು.

ಕೊಟ್ಟೂರಿನಲ್ಲಿ ಗ್ರೇಡ್-2 ತಹಸೀಲ್ದಾರ್, ಹೂವಿನಹಡಗಲಿಯಲ್ಲಿ ತಹಸೀಲ್ದಾರ್‌ಗೆ ಅಂಗನವಾಡಿ ಕಾರ್ಯಕರ್ತೆಯರು ಮನವಿ ಸಲ್ಲಿಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net