ಬಳ್ಳಾರಿಯ ಬಿಮ್ಸ್‌ನಲ್ಲಿ ಹೆಚ್ಚುವರಿ ಡಿ ಗ್ರೂಪ್ ಸಿಬ್ಬಂದಿ ನೇಮಿಸಬೇಕು ಎಂದು ಎನ್‌ಐಯುಟಿಯುಸಿ ಸಂಘಟನೆಯಿಂದ ಬಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆ ಅಧ್ಯಕ್ಷ ಎ.ದೇವದಾಸ್, ಕಾರ್ಯದರ್ಶಿ ಡಾ.ಪ್ರಮೋದ್ ಎನ್., ಪದಾಧಿಕಾರಿಗಳಾದ ವಿಶಾಲಕ್ಷಿ, ಸೌಮ್ಯ, ಹನುಮಂತಮ್ಮ ಇತರರಿದ್ದರು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಾರ್ಮಿಕರ ಮೇಲೆ ಒತ್ತಡ ತೀವ್ರ
ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು
ಬಳ್ಳಾರಿ : ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ(ಬಿಮ್ಸ್) ಹೆಚ್ಚುವರಿಯಾಗಿ ಡಿ ಗ್ರೂಪ್ ಸಿಬ್ಬಂದಿ ನೇಮಿಸಬೇಕು ಎಂದು ಆಗ್ರಹಿಸಿ, ಎನ್‌ಐಯುಟಿಯುಸಿ ಸಂಘಟನೆಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.
ಬಿಮ್ಸ್ ಅಧೀನದಲ್ಲಿ ಟ್ರಾಮಾಕೇರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭವಾಗಿವೆ.
ನಿತ್ಯ ಜಿಲ್ಲೆ ಸೇರಿದಂತೆ ನೆರೆಯ ಆಂಧ್ರದಿಂದ ಎರಡು ಸಾವಿರಕ್ಕೂ ಅಧಿಕ ಜನರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಇಷ್ಟೊಂದು ರೋಗಿಗಳ ಚಿಕಿತ್ಸೆಯ ಸಲುವಾಗಿ 750ರಿಂದ 900 ಡಿ ಗ್ರೂಪ್ ನೌಕರರ ಅವಶ್ಯಕತೆಯಿದೆ. ಆದರೆ, ಕೇವಲ 450 ಸಿಬ್ಬಂದಿ ಮಾತ್ರ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಕಾರ್ಮಿಕರ ಮೇಲೆ ಒತ್ತಡ ತೀವ್ರವಾಗಿದೆ.
ಈ ಹಿನ್ನೆಲೆ ಆರೋಗ್ಯದಂತಹ ಅವಶ್ಯಕ ಸೇವೆಯ ವಿಷಯದಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡು, ಕೂಡಲೇ ಅವಶ್ಯಕವಿರುವ ಹೆಚ್ಚುವರಿ ಡಿ ಗ್ರೂಪ್ ಸಿಬ್ಬಂದಿ ನೇಮಿಸಬೇಕು. ಹೊರಗುತ್ತಿಗೆ ಸಿಬ್ಬಂದಿಗೆ ನೇಮಕಾತಿ ಪತ್ರ ಸಿಗದೆ, ಪಿಎಫ್ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಸಮಸ್ಯೆ ನೀಗಿಸಲು ಗುತ್ತಿಗೆದಾರರ ಜತೆ ಸಭೆ ಆಯೋಜಿಸಿ ಚರ್ಚಿಸಬೇಕು. ಬಿಮ್ಸ್‌ನಲ್ಲಿ ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು ಸೇರಿದಂತೆ ನಾನಾ ಬೇಡಿಕೆಗಳು ಈಡೇರಿಸಬೇಕು ಎಂದು ಸಂಘಟನಕಾರರು ಆಗ್ರಹಿಸಿದರು.