ಸಾರ್ವಜನಿಕರಲ್ಲಿ ಭೀತಿ ಮೂಡಿಸುತ್ತಿದೆ ಅಪೂರ್ಣ ಟ್ಯಾಂಕ್

ಕೊಟ್ಟೂರಿನ ಬಸವೇಶ್ವರ ನಗರದಲ್ಲಿ ನೀರಿನ ಟ್ಯಾಂಕ್ ಕಾಮಗಾರಿ ಅಪೂರ್ಣಗೊಂಡಿರುವುದು.
ಕೊಟ್ಟೂರಿನ ಬಸವೇಶ್ವರ ನಗರದಲ್ಲಿ ನೀರಿನ ಟ್ಯಾಂಕ್ ಕಾಮಗಾರಿ ಅಪೂರ್ಣಗೊಂಡಿರುವುದು.
Published on
ಬಂದಾತರ ಪ್ರಕಾಶ
ಕೊಟ್ಟೂರು: ಪಟ್ಟಣದ ಬಸವೇಶ್ವರ ನಗರದಲ್ಲಿ ನಿರಂತರ ಶುದ್ಧ ನೀರು ಸರಬರಾಜಿಗಾಗಿ ನಿರ್ಮಿಸಲಾಗುತ್ತಿರುವ ಟ್ಯಾಂಕ್ ಕಾಮಗಾರಿ ನನೆಗುದಿಗೆ ಬಿದ್ದಿದೆ. ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಸಾರ್ವಜನಿಕರಲ್ಲಿ ಅಪಾಯದ ಭೀತಿ ಎದುರಾಗಿದೆ.
2019-20ನೇ ಸಾಲಿನಲ್ಲಿ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಬಳಿಕ ಕೋವಿಡ್ ಲಾಕ್‌ಡೌನ್‌ನಿಂದಾಗಿ ಟ್ಯಾಂಕ್ ನಿರ್ಮಾಣ ಕಾರ್ಯ ಒಂದು ವರ್ಷ ನನೆಗುದಿಗೆ ಬಿದ್ದಿತ್ತು. 2021 ರಲ್ಲಿ ಮತ್ತೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಪ್ರಸ್ತುತ ಟ್ಯಾಂಕ್ ಅಸ್ಥಿಪಂಜರದಂತೆ ಭಾಸವಾಗುತ್ತಿದೆ. ಸೆಂಟ್ರಿಂಗ್‌ಗೆ ಅಳವಡಿಸಲಾಗಿರುವ ಸ್ಟೀಲ್, ಹಲಗೆಗಳು ಗಾಳಿ, ಮಳೆ, ಬಿಸಿಲಿಗೆ ಸಂಪೂರ್ಣ ಹಾಳಾಗಿದ್ದು ಬೀಳುವ ಭೀತಿ ಎದುರಾಗಿದೆ. ಟ್ಯಾಂಕ್‌ಗೆ ಹೊಂದಿಕೊಂಡಂತೆ ರಸ್ತೆ ಇರುವುದರಿಂದ ವಾಹನ ಸವಾರರು ಭಯದಲ್ಲಿ ಸಂಚರಿಸುವಂತಾಗಿದೆ.
ಪಟ್ಟಣದ ಜನತೆಗೆ ಶುದ್ಧ ನೀರು ಸರಬರಾಜು ಮಾಡುವುದಕ್ಕಾಗಿ 13.5 ಕೋಟಿ ರೂ. ವೆಚ್ಚದ ಯೋಜನೆ ಮಂಜೂರಾಗಿತ್ತು, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಯೋಜನೆ ರದ್ದಾಗಿದೆ. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದಿರುವುದು ಇದಕ್ಕೆ ಕಾರಣವಾಗಿದೆ. ಅಪೂರ್ಣಗೊಂಡಿರುವ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಪಟ್ಟಣದ ನಿವಾಸಿಗಳ ಆಗ್ರಹವಾಗಿದೆ.
"

ಕೊಟ್ಟೂರಿನ ಬಸವೇಶ್ವರ ನಗರದಲ್ಲಿ ಭಾಗಶಃ ನಿರ್ಮಾಣವಾಗಿರುವ ನೀರಿನ ಟ್ಯಾಂಕ್ ಯೋಜನೆ ರದ್ದಾಗಿದೆ. ಟ್ಯಾಂಕ್ ನಿರ್ಮಾಣಕ್ಕೆ ಅಳವಡಿಸಿರುವ ಸೆಂಟ್ರಿಂಗ್ ತೆರವುಗೊಳಿಸಲು ಇಂಜಿನಿಯರ್‌ಗಳಿಗೆ ತಿಳಿಸಿದ್ದೇವೆ. ಈ ಕುರಿತು ಶೀಘ್ರ ಕ್ರಮ ವಹಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net