ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಆದಾಯ ದ್ವಿಗುಣ

ದೇವದುರ್ಗದ ಯಾಟಗಲ್ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಕೃಷಿ ಆಧಾರಿತ ಉದ್ಯೋಗ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ರೈತರಿಗೆ ಕೃಷಿ ಪರಿಕರ ವಿತರಿಸಲಾಯಿತು. ಕೃಷಿ ವಿಜ್ಞಾನಿ ಡಾ.ಡಿ.ಕೆ.ಹಾದಿಮನಿ, ಕೀಟಶಾಸ್ತ್ರಜ್ಞ ಕೃಷ್ಣ ಬಿರಾದಾರ್ ಪಾಟೀಲ್, ಆಡಳಿತ ಮಂಡಳಿ ಸದಸ್ಯ ಮಲ್ಲೇಶ ಕೊಲಮಿ, ರೈತರಾದ ಬಸವರಾಜ, ಶಿವಪ್ಪ, ನಾಗರಾಜ, ಬೂದಿಬಸಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ
  • ಪರಿಕರ
  • ವಿತರಣೆ
ದೇವದುರ್ಗ: ರೈತರು ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರಾಟ ವಿಧಾನ ಅರಿತುಕೊಂಡರೆ ಆದಾಯ ದ್ವಿಗುಣ ಮಾಡಿಕೊಳ್ಳಬಹುದು ಎಂದು ಕೃಷಿ ವಿಜ್ಞಾನಿ ಡಾ.ಡಿ.ಕೆ.ಹಾದಿಮನಿ ಹೇಳಿದರು.
ತಾಲೂಕಿನ ಯಾಟಗಲ್ ಗ್ರಾಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಆಯೋಜಿಸಿದ್ದ ರೈತರ ಆದಾಯ ದ್ವಿಗುಣಗೊಳಿಸುವ ಕೃಷಿ ಆಧಾರಿತ ಉದ್ಯೋಗ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ರೈತರಿಗೆ ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಯುವಕರು ಸ್ವಸಹಾಯ ಸಂಘಗಳಿಂದ ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು. ಊರು ತೊರೆದು ಕೆಲಸಕ್ಕಾಗಿ ನಗರಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯುವಕರಿಗೆ ಕೃಷಿ ವಿಜ್ಞಾನಗಳ ವಿವಿ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತದೆ. ಬೆಳೆವಾರು ಸಂಘಗಳ ರಚನೆ, ಉದ್ದೇಶ ಹಾಗೂ ಪ್ರಾಮುಖ್ಯವನ್ನು ಮನವರಿಕೆ ಮಾಡಿಕೊಡುವುದು ವಿಸ್ತರಣಾ ಕೇಂದ್ರದ ಉದ್ದೇಶವಾಗಿದೆ ಎಂದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ದೇವೇಂದ್ರ ಬೀರಲದಿನ್ನಿ ಮಾತನಾಡಿ, ದಶಕಗಳ ಹಿಂದೆ ದೇಶದ ಶೇ.80 ಜನರು ಕೃಷಿಯಲ್ಲಿ ತೊಡಗಿಕೊಂಡಿದ್ದರು. ಈಗ ಆ ಪ್ರಮಾಣ ಶೇ.62ಕ್ಕೆ ಕುಸಿದಿದೆ. 140 ಕೋಟಿ ಜನರಿಗೆ ಬೇಕಾಗುವ ಆಹಾರಧಾನ್ಯಗಳನ್ನು ಉತ್ಪಾದಿಸಲಾಗುತ್ತಿಲ್ಲ. ಹೀಗಾಗಿ ಕೃಷಿಯಲ್ಲಿ ಉದ್ಯಮಿಗಳಾಗಲು ಸಾಕಷ್ಟು ಅವಕಾಶಗಳಿವೆ. ಹೊಸತಲೆಮಾರಿನ ಅಗತ್ಯಗಳಿಗೆ ಕೃಷಿ ಒಗ್ಗಿಸಿಕೊಳ್ಳಬೇಕು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net