ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ

ಹೆರಕಲ್ಲು ಗ್ರಾಮದ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮೋಕ್ಷ ಫೌಂಡೇಷನ್ ವತಿಯಿಂದ ಪ್ರೋತ್ಸಾಹ ಧನ ನೀಡಲಾಯಿತು. ಮೋಕ್ಷ ಫೌಂಡೇಷನ್ ಸಂಸ್ಥಾಪಕ ಬಿ.ವೀರೇಶ, ಶಿಕ್ಷಕರಾದ ಎರೆಪ್ಪಗೌಡ, ಶಿವಪ್ರಸಾದ್, ಖಾದರ್ ಬಾಷಾ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಎಸ್ಸೆಸ್ಸೆಲ್ಸಿ
  • ಪರೀಕ್ಷೆಯಲ್ಲಿ
  • ಅತ್ಯುತ್ತಮ
ಸಿರಗುಪ್ಪ: ಮೋಕ್ಷ ಫೌಂಡೇಷನ್ ವಿದ್ಯಾರ್ಥಿಗಳು, ಶಾಲೆಗಳಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದು ಶಿಕ್ಷಕ ಎರೆಪ್ಪಗೌಡ ಹೇಳಿದರು.
ಹೆರಕಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ಶಾಲೆಯ ಐದು ವಿದ್ಯಾರ್ಥಿಗಳಿಗೆ ಮೋಕ್ಷ ಫೌಂಡೇಷನ್‌ನಿಂದ ತಲಾ ಎರಡು ಸಾವಿರ ರೂ. ಪ್ರತಿಭಾ ಪುರಸ್ಕಾರ ನೀಡಿ ಸೋಮವಾರ ಮಾತನಾಡಿದರು. ಸಮಾಜ ಹಿಡಿಕೊಟ್ಟರೆ ಪಡಿ ಕೊಡುವ ಶರಣರ ಕಾಯಕ ತತ್ವವನ್ನು ಮೋಕ್ಷ ಫೌಂಡೇಷನ್ ಸಂಸ್ಥಾಪಕ ಬಿ.ವೀರೇಶ ಅಳವಡಿಸಿಕೊಂಡಿದ್ದಾರೆ ಎಂದರು.
ಮೋಕ್ಷ ಫೌಂಡೇಷನ್ ಸಂಸ್ಥಾಪಕ ಬಿ.ವೀರೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದರು. ಶಿಕ್ಷಕರಾದ ಲಿಂಗಪ್ಪ, ಶಿವಪ್ರಸಾದ್, ಖಾದರ್ ಬಾಷಾ, ಶ್ರೀಕಾಂತ್, ಪುಷ್ಪಾವತಿ ಇಮಾಮ್ ಹುಸೇನ್, ಮಲ್ಲಿಕಾರ್ಜುನ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net