ಆದೇಶದಂತೆ ವೇತನ ಜಾರಿಗೊಳಿಸಿ

ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಗ್ರಾಪಂ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು. ನೌಕರರಾದ ರಮೇಶ್, ಮಹೇಶ್‌ಗೌಡ, ಮಾರುತಿ, ಆಂಜನೇಯ, ಅಮರೇಶ್, ಸಿದ್ದಪ್ಪ, ಶಿವಣ್ಣ ಇತರರಿದ್ದರು.
ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಗ್ರಾಪಂ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು. ನೌಕರರಾದ ರಮೇಶ್, ಮಹೇಶ್‌ಗೌಡ, ಮಾರುತಿ, ಆಂಜನೇಯ, ಅಮರೇಶ್, ಸಿದ್ದಪ್ಪ, ಶಿವಣ್ಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಗ್ರಾಪಂ ನೌಕರ ಸಂಘ ಆಗ್ರಹ

ಬಳ್ಳಾರಿ :

ಗ್ರಾಪಂ ನೌಕರರಿಗೆ ಕಳೆದ 2022ರ ಮೇ ತಿಂಗಳಲ್ಲಿ ಸರ್ಕಾರ ಹೊರಡಿಸಿರುವ ವೇತನ ಪರಿಷ್ಕ್ರರಣೆ ಆದೇಶದಂತೆ ವೇತನ ಜಾರಿಗೆ ಆಗ್ರಹಿಸಿ, ಇಲ್ಲಿನ ಜಿಪಂ ಸಭಾಂಗಣದಲ್ಲಿ ರಾಜ್ಯ ಗ್ರಾಪಂ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು.

ಬೆಲೆ ಏರಿಕೆಯ ನಡುವೆ ಪ್ರಸ್ತುತ ದೊರೆಯುತ್ತಿರುವ ವೇತನದಲ್ಲಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಖರ್ಚು ಭರಿಸುವುದು ಕಷ್ಟವಾಗಿದೆ. 2022ರ ಮೇ22ರಂದು ಸರ್ಕಾರ ವೇತನ ನಿಗದಿಪಡಿಸಿ ಆದೇಶ ಹೊರಡಿಸಿದ ಹಿನ್ನಲೆ ಗ್ರಾಪಂ ನೌಕರರಲ್ಲಿ ಆಶಾಭಾವನೆ ಮೂಡಿತ್ತು.

ಗ್ರಾಮೀಣ ಪ್ರದೇಶಗಳಲ್ಲಿ ಸಂಜೀವಿನಿ ಒಕ್ಕೂಟದ ಮೂಲಕ ಪಂಚಾಯಿತಿಗಳ ತರಬೇತಿಯೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸ್ವಚ್ಛವಾಹಿನಿ ಮಹಿಳಾ ವಾಹನ ಚಾಲಕಿಯರು ಹಾಗೂ ಕಸಗುಡಿಸುವ ಮಹಿಳೆಯರಿಗೆ ಕೆಲವೆಡೆ 12 ವರ್ಷಗಳಿಂದ ವೇತನ ಪಾವತಿಯಾಗಿಲ್ಲ. ಸಂಜೀವಿನಿ ಒಕ್ಕೂಟದಿಂದ ಬೇರ್ಪಡಿಸಿ ಗ್ರಾಪಂ ಮೂಲಕವೇ ವೇತನ ಪಾವತಿಸುವ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಮುಂದುವರಿಸಬೇಕು. ಕಂಪ್ಯೂಟರ್ ಹಾಗೂ ಅಗತ್ಯ ವಿದ್ಯಾರ್ಹತೆ ಹೊಂದಿರುವ ಪಂಚಾಯಿತಿ ನೌಕರರಿಗೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net