ಮಹಿಳೆಯರ ಶಿಕ್ಷಣದ ಮೇಲೆ ಪರಿಣಾಮ

ಹೂವಿನಹಡಗಲಿಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಮತ್ತು ಅಖಿಲ ಭಾರತ ಯುವ ಜನ ಫೆಡರೇಷನ್ ತಾಲೂಕು ಸಮಿತಿಯಿಂದ ಶಿರಸ್ತೇದಾರ್ ಸಲೀಂಗೆ ಮನವಿ ಸಲ್ಲಿಸಲಾಯಿತು. ತಾಲೂಕು ಸಂಚಾಲಕ ಪಿ.ಎಂ.ತೋಂಟದಾರ್ಯ, ಪ್ರಮುಖರಾದ ಶಾಂತರಾಜ ಜೈನ್, ಮಾಲತೇಶ, ಹನುಮಂತ, ಅಭಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು
  • ಸಮಿತಿ
  • ಪ್ರತಿಭಟನೆ
ಹೂವಿನಹಡಗಲಿ: ರಾಜ್ಯದಲ್ಲಿನ 25,683 ಸರ್ಕಾರಿ ಶಾಲೆಗಳನ್ನು ಮುಚ್ಚುವ ತೀರ್ಮಾನ ಹಾಗೂ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ವಿರೋಧಿಸಿ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶನಿವಾರ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಮತ್ತು ಅಖಿಲ ಭಾರತ ಯುವ ಜನ ಫೆಡರೇಷನ್ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಸಲೀಂಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಸಂಚಾಲಕ ಪಿ.ಎಂ.ತೋಂಟದಾರ್ಯ ಮಾತನಾಡಿ, ರಾಜ್ಯ ಸರ್ಕಾರ ಈಗಾಲೇ 25,000 ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ. ರಾಜ್ಯದ ಬಡ ಹಾಗೂ ಗ್ರಾಮೀಣ ಭಾಗದ ದುಡಿಯುವ ವರ್ಗ, ಮಧ್ಯಮ ವರ್ಗದವರ ಶಿಕ್ಷಣವನ್ನು ಕಸಿದುಕೊಂಡಂತಾಗುತ್ತದೆ.
ಜನರು ವಾಸವಾಗಿರುವ ಸ್ಥಳದಿಂದ ಶಾಲೆಗಳು ದೂರವಾಗುವುದರಿಂದ ಮಹಿಳೆಯರ ಶಿಕ್ಷಣದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಮಕ್ಕಳು ಓದಿನ ಬದಲಿಗೆ ಬಾಲ ಕಾರ್ಮಿಕ, ಬಾಲ್ಯ ವಿವಾಹ ಮತ್ತು ಮಕ್ಕಳ ಸಾಗಣಿಗೆ ಬಲಿಯಾಗುವ ಅಪಾಯವಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net