ಅಕ್ರಮವಾಗಿ ಸಂಗ್ರಹಿಸಿದ್ದ ಜೋಳ ವಶ

ಅಸುಂಡಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಜೋಳವನ್ನು ಎಸಿ ಎಚ್.ಡಿ.ರಾಜೇಶ್ ದಾಳಿ ನಡೆಸಿ ವಶಪಡಿಸಿಕೊಂಡರು. ತಹಸೀಲ್ದಾರ್ ಟಿ.ರೇಖಾ ಇದ್ದರು.
ಅಸುಂಡಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಜೋಳವನ್ನು ಎಸಿ ಎಚ್.ಡಿ.ರಾಜೇಶ್ ದಾಳಿ ನಡೆಸಿ ವಶಪಡಿಸಿಕೊಂಡರು. ತಹಸೀಲ್ದಾರ್ ಟಿ.ರೇಖಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಂಎಸ್ಪಿ ದರಕ್ಕೆ ಮಾರಾಟ ಯತ್ನದ ಆರೋಪ
  • ಕೆಲ ಪ್ರಭಾವಿ ವ್ಯಾಪಾರಿಗಳು ಸಂಚು
ಬಳ್ಳಾರಿ : ನೆರೆಯ ಆಂಧ್ರದಿಂದ ಕಡಿಮೆ ದರದಲ್ಲಿ ಜೋಳ ಖರೀದಿಸಿ, ಜಿಲ್ಲೆಯ ರೈತರ ಹೆಸರಿನಲ್ಲಿ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿ ಎಂಎಸ್ಪಿ ಯೋಜನೆ ವಂಚಿಸಲು ಯತ್ನಿಸಿದ ಜಾಲವನ್ನು ಅಧಿಕಾರಿಗಳು ಬೇಧಿಸಿದ್ದಾರೆ.
ತಾಲೂಕಿನ ಅಸುಂಡಿ ಗ್ರಾಮ ಹಾಗೂ ಎಪಿಎಂಸಿ ಆವರಣದ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಜೋಳದ ಮೇಲೆ ಎಸಿ ಎಚ್.ಡಿ.ರಾಜೇಶ್ ನೇತೃತ್ವದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಒಟ್ಟು 890 ಚೀಲ ಜೋಳವನ್ನು ವಶಪಡಿಸಿಕೊಂಡಿದ್ದಾರೆ. 480 ಅಸುಂಡಿ ಗ್ರಾಮ ಹಾಗೂ 410 ಚೀಲ ಎಪಿಎಂಸಿ ಗೋದಾಮು ಸೇರಿ ಒಟ್ಟು 890 ಚೀಲಗಳನ್ನು ಪತ್ತೆ ಹಚ್ಚಲಾಗಿದೆ.
ಆಂಧ್ರಪ್ರದೇಶದ ಗುಂಟೂರಿನಲ್ಲಿ ಪ್ರತಿ ಕ್ವಿಂಟಲ್‌ಗೆ 2 ಸಾವಿರ ರೂ. ದಂತೆ ದರದಲ್ಲಿ ಜೋಳ ಖರೀದಿಸಲಾಗಿದೆ. ಅದನ್ನು ಜಿಲ್ಲೆಯ ಸ್ಥಳೀಯ ರೈತರ ಹೆಸರಿನಲ್ಲಿ ನೋಂದಣಿ ಮಾಡಿ, ಎಂಎಸ್ಪಿ ದರದ ಪ್ರತಿ ಕ್ವಿಂಟಲ್‌ಗೆ 3,700 ರೂ. ಮಾರಾಟ ಮಾಡಿ ಲಾಭ ಪಡೆಯಲು ಕೆಲ ಪ್ರಭಾವಿ ವ್ಯಾಪಾರಿಗಳು ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ವಶಪಡಿಸಿಕೊಂಡ ಜೋಳವನ್ನು ಆಂಧ್ರಪ್ರದೇಶದಿಂದಲೇ ಸಾಗಿಸಲಾಗಿದೆ.
ಜಿಲ್ಲೆಯ ರೈತರ ಪಹಣಿ ಬಳಸಿ ಮಾರಾಟ ಮಾಡಲು ಸಿದ್ಧತೆ ನಡೆಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಸಾಗಣೆ ವಿವರ ಹಾಗೂ ಖರೀದಿ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅಕ್ರಮ ದಾಸ್ತಾನು ಹಾಗೂ ಸರ್ಕಾರದ ಎಂಎಸ್‌ಪಿ ಯೋಜನೆಯ ದುರ್ಬಳಕೆ ಯತ್ನಕ್ಕೆ ಸಂಬಂಧಿಸಿದಂತೆ ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net