ಅಕ್ರಮ ಅದಿರು ಸಾಗಣೆ ಲಾರಿಗಳು ವಶ

ಅಕ್ರಮ ಅದಿರು ಸಾಗಣೆ ಲಾರಿಗಳು ವಶ
ಅಕ್ರಮ ಅದಿರು ಸಾಗಣೆ ಲಾರಿಗಳು ವಶ
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ
  • ಮೆಟ್ರಿಕ್ ಟನ್ ಕಬ್ಬಿಣದ ಅದಿರು ಜಪ್ತಿ
ಬಳ್ಳಾರಿ : ತಾಲೂಕಿನ ಹಲಕುಂದಿ ಗ್ರಾಮದ ವಿಆರ್‌ಕೆಪಿ ಫ್ಯಾಕ್ಟರಿ ಬಳಿ ಅಕ್ರಮವಾಗಿ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ಜಾಲವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಎರಡು ಟಿಪ್ಪರ್ ಲಾರಿ ಹಾಗೂ 36 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಜಪ್ತಿಗೊಳಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಕೌಲಬಜಾರ್ ಕೆ. ಸತ್ಯನಾರಾಯಣ, ಓಬುಳಾಪುರಂನ ಕೆ.ನಾಗರಾಜ್ ಬಂಧಿತರು. ಮೇ23ರಂದು ಆಂಧ್ರಪ್ರದೇಶದ ಸೋಮಲಾಪುರ ರೈಲ್ವೆ ಸ್ಲೈಡಿಂಗ್ಸ್ ಪ್ರದೇಶದಿಂದ ತಾಲೂಕಿನ ಹಲಕುಂದಿ ಗ್ರಾಮದಲ್ಲಿರುವ ಶ್ರೀತಿರುಪತಿ ಸ್ಟೀಲ್ಸ್ ಕಾಸ್ಟ್ ಲಿಮಿಟೆಡ್ ಘಟಕಕ್ಕೆ ಅದಿರು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net