ಜ.16 ರಂದು 20 ಟನ್ ಅದಿರು ಅನುಮತಿಯಿಲ್ಲದೆ ಎನ್‌ಎಂಡಿಸಿಸಿ ಬ್ಲಾಕ್‌ನಿಂದ ಸಾಗಿಸುತ್ತಿದ್ದ ಲಾರಿಯನ್ನು ಸಂಡೂರಿನ ಬಾಬಯ್ಯ ಕ್ರಾಸ್ ಬಳಿ ತಡೆದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಮೊಳಕಾಲ್ಮೂರಿನ ಚಿದಾನಂದಪ್ಪ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದೆ. ಅದಿರು ಆಂದ್ರಪ್ರದೇಶದ ನೇಮಕಲ್ಲು ಬಳಿ ಇರುವ ಸಾಯಿ ಬಾಲಾಜಿ ಪೆಲೆಟ್ ಪ್ಲಾಂಟ್‌ಗೆ ಸಾಗಿಸಲಾಗುತ್ತಿತ್ತು ಎಂಬುದಾಗಿ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ. ಆ ಲಾರಿಗೆ ಜಿಪಿಎಸ್‌ಯಿದೆ. ಅದು ಎಲ್ಲಿಂದ ಬಂತು, ಈ ಹಿಂದೆ ಎಲ್ಲೆಲ್ಲೆ ಸಂಚಾರಿಸಿದೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪತ್ತೆಹಚ್ಚಲಾಗುವುದು ಎಂದು ಹೇಳಿದರು.