ಈ ರಸ್ತೆ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆಯು ಒಟ್ಟು 233 ಮರಗಳ ಕಟಾವಿಗೆ ಅನುಮತಿ ಕೋರಿತ್ತು. ಆದರೆ, ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯು ಮಾಚ್. 23ರಂದೇ ಪತ್ರ ಬರೆದು, 139 ಮರಗಳನ್ನು ಉಳಿಸಿಕೊಂಡು ಫುಟ್‌ಪಾತ್ ವಿನ್ಯಾಸ ಬದಲಿಸುವಂತೆ ಸೂಚಿಸಿತ್ತು. ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಗುತ್ತಿಗೆದಾರರು, ತಡರಾತ್ರಿ ಏಕಾಏಕಿ ಮರಗಳನ್ನು ಕಡಿಯುವ ಮೂಲಕ ಕಾನೂನು ಬಾಹಿರ ಕೃತ್ಯ ಎಸಗಿದ್ದಾರೆ. ಕರ್ತವ್ಯನಿರತ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಮತ್ತು ಅಕ್ರಮವಾಗಿ ಮರಗಳನ್ನು ಕಡಿದ ಆರೋಪದಡಿ ಗುತ್ತಿಗೆದಾರ ಟಿಲ್ಲು , ರತ್ನಬಾಬು, ರವಿ ಸೇರಿ ಎಂಟು ಜನರ ವಿರುದ್ಧ ನಗರದ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ ಕೆ.ಎನ್. ತಿಳಿಸಿದ್ದಾರೆ.