ಸಮಾಜಕ್ಕೆ ಪೂರಕ ಆದರ್ಶಗಳು

ಕುರುಗೋಡಿನ ತಾಲೂಕು ಆಡಳಿತ ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.
ಕುರುಗೋಡಿನ ತಾಲೂಕು ಆಡಳಿತ ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.
Published on
ಕುರುಗೋಡು: ಹೇಮರಡ್ಡಿ ಮಲ್ಲಮ್ಮ ಬದುಕು ಮಹಾನ್ ಗ್ರಂಥವಾಗಿದೆ. ಸಾಂಸಾರಿಕ ಜೀವನ ನಡೆಸುತ್ತಲೂ ಸಾಧನೆ ಮಾಡಬಹುದು ಎಂಬುದನ್ನು ಹೇಮರಡ್ಡಿ ಮಲ್ಲಮ್ಮ ನಿರೂಪಿಸಿದ್ದಾರೆ ಎಂದು ಶಿರಸ್ತೇದಾರ್ ವಿಜಯ್ ಕುಮಾರ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಭಾನುವಾರ ಆಯೋಜಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೀತಿ, ವಿಶ್ವಾಸದಿಂದ ಮಾಡಿದ ಕೆಲಸ ಫಲ ಕೊಡುತ್ತದೆ. ವ್ಯಭಿಚಾರಿಯಾದ ಮೈದುನ ವೇಮನನ್ನು ತಿದ್ದಿ ತೀಡಿ, ಮಹಾ ತತ್ವಜ್ಞಾನಿಯನ್ನಾಗಿ ರೂಪಿಸಿದರು. ಆಂಧ್ರದ ನಾಡಗೀತೆಯಲ್ಲಿ ಮಲ್ಲಮ್ಮ ಅವರ ಉಲ್ಲೇಖವಿದೆ. ಅಕ್ಕಮಹಾದೇವಿ ಶ್ರೀಶೈಲ ಮಲ್ಲಿಕಾರ್ಜುನನ್ನು ಪತಿ ಎಂದರೆ, ಮಲ್ಲಮ್ಮ ತಂದೆ ಎಂದರು. ಇಬ್ಬರ ದೃಷ್ಟಿ ಭಿನ್ನವಾಗಿ ಕಂಡರೂ ಆಶಯ, ಆದರ್ಶಗಳು ಸಮಾಜಕ್ಕೆ ಪೂರಕ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net