ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ನಾಯಕರು ’ರಿಜೆಕ್ಟ್ ಪೀಸ್’ಗಳಾಗಿದ್ದಾರೆ. ವಾಲ್ಮೀಕಿ ನಿಗಮದ ವಿಚಾರವಾಗಿ ಚರ್ಚೆಗೆ ಆಹ್ವಾನಿಸಿದರೂ ಬಿಜೆಪಿ ನಾಯಕರು ಬರಲಿಲ್ಲ. ಏಕೆಂದರೆ ಅವರ ಬಳಿ ಯಾವುದೇ ಸೂಕ್ತ ದಾಖಲೆಗಳಿಲ್ಲ. ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಅಧಿವೇಶನ ನಡೆಸಲಿದ್ದು, ಧೈರ್ಯವಿದ್ದರೆ ಚರ್ಚೆಗೆ ಬರಲಿ, ಜನರ ಬಳಿಯೇ ಸತ್ಯ ತಿಳಿಸೋಣ ಎಂದು ಸವಾಲು ಎಸೆದರು. ಶಾಸಕರಾದ ಜೆ.ಎನ್.ಗಣೇಶ್, ಅನ್ನಪೂರ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಮೇಯರ್ ಪಿ.ಗಾದೆಪ್ಪ, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ, ಮುಖಂಡರಾದ ವೆಂಕಟೇಶ್ ಹೆಗಡೆ, ಎಚ್.ತಿಮ್ಮನಗೌಡ, ಪಿ.ಜಗನ್ನಾಥ್ ಇದ್ದರು.