ಶೀಲ ಶಂಕಿಸಿ ಪತ್ನಿ ಕೊಂದ ಪತಿ

ಶೀಲ ಶಂಕಿಸಿ ಪತ್ನಿ ಕೊಂದ ಪತಿ
ಶೀಲ ಶಂಕಿಸಿ ಪತ್ನಿ ಕೊಂದ ಪತಿ
Published on

ಪ್ರಮುಖ ಮುಖ್ಯಾಂಶಗಳು

  • ಶೀಲ
ಬಳ್ಳಾರಿ : ನಡತೆ ಮೇಲೆ ಅನುಮಾನಪಟ್ಟು ಪತಿಯೇ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಹಲಕುಂದಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ನಿವಾಸಿ ಸವಿತಾ(25) ಮೃತ. ಕೆಲ ತಿಂಗಳ ಹಿಂದೆ ತಾಲೂಕಿನ ಹಲಕುಂದಿಗೆ ದಂಪತಿ ಬಂದು ನೆಲೆಸಿದ್ದರು. ಸವಿತಾ ಅವರ ನಡತೆ ಬಗ್ಗೆ ಪತಿ ಶ್ರೀನಿವಾಸ್ ಅನುಮಾನ ಪಡುತ್ತಿದ್ದ, ಇದಕ್ಕಾಗಿ ನಿತ್ಯ ಜಗಳವಾಗುತ್ತಿತ್ತು. ಏ.17 ರಂದು ರಾತ್ರಿ ಮನೆಯಲ್ಲಿ ಇಬ್ಬರಿಗೆ ಕಲಹವಾಗಿತ್ತು. ಆಗ ಶ್ರೀನಿವಾಸ್ ಶಿಲ್ಪಿ ಪತ್ನಿಗೆ ಬೆಂಕಿ ಹಚ್ಚಿ ಮನೆಯಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಸವಿತಾ ಅವರನ್ನು ಬಿಮ್ಸ್ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಸವಿತಾ ಪತಿ ಶ್ರೀನಿವಾಸ್ ಶಿಲ್ಪಿ ಹಾಗೂ ಆತನ ಮೂವರ ಸಂಬಂಧಿಗಳ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
====
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net