ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ಕಳೆದ ಸಾಲಿನ ಮುಂಗಾರು ಹಂಗಾಮಿನ ರಾಗಿಯನ್ನು ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 4886 ರೂ.ನಂತೆ ಒಟ್ಟು 71.500 ಕ್ವಿಂಟಾಲ್ ಖರೀದಿಸಿದ್ದು, 2,310 ರೈತರ ಪೈಕಿ ಕೇವಲ 360 ರೈತರಿಗೆ ಹಣ ಪಾವತಿಸಿದೆ. ಇನ್ನೂ 1,928 ರೈತರಿಗೆ ಹಣ ಪಾವತಿಸಬೇಕಿದ್ದು, ಕೂಡಲೇ ಕ್ರಮವಹಿಸಬೇಕೆಂದು ಒತ್ತಾಯಿಸಿದರು.