ಮಾನವತೆ ನಿಜ ಧರ್ಮದ ಮೂಲ

ಹರಪನಹಳ್ಳಿ ತೆಗ್ಗಿನ ಮಠದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ 79ನೇ ಸಂಸ್ಮರಣೆ ಕಾರ್ಯಕ್ರಮವನ್ನು ಸಂಸದ ಈ. ತುಕಾರಾಮ್ ಉದ್ಘಾಟಿಸಿದರು. ರಾಮಘಟ್ಟ ಪುರವರ್ಗ ಮಠದ ರೇವಣಸಿದ್ಧ ಸ್ವಾಮೀಜಿ, ಜ್ಯೋತಿಷ್ಯ ತಜ್ಞ ರಾಜಣ್ಣ, ಟಿಎಂಎಇ ಸಂಸ್ಥೆ ಕಾರ್ಯದರ್ಶಿ ಟಿ. ಎಂ. ಚಂದ್ರಶೇಖರಯ್ಯ, ಟಿ.ಎಂ. ವಿಶ್ವನಾಥ, ನಿವೃತ್ತ ಇಒ ಎಚ್.ಎಂ.ಕೊಟ್ರಯ್ಯ, ಟಿ.ಎಂ. ಪ್ರತೀಕ್, ಟಿಎಂಎಇ ಸಂಸ್ಥೆಯ ಡೀನ್ ಟಿ.ಎಂ. ರಾಜಶೇಖರ, ಶಿರಬಿ ಪ್ರಕಾಶ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತೆಗ್ಗಿನಮಠ ಸಂಸ್ಥಾನ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅಭಿಮತ
  • ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ 79ನೇ ಸಂಸ್ಮರಣೆ
ಹರಪನಹಳ್ಳಿ: ವಿವಿಧ ಧಾರ್ಮಿಕ ಆಚರಣೆ ಹಾಗೂ ವಿಭಿನ್ನವಾದ ಸಂಪ್ರದಾಯ, ವೈಶಿಷ್ಟೃಗಳಿಗೆ ದೇಶವು ಪ್ರಸಿದ್ಧಿ ಹೊಂದಿದೆ ಎಂದು ತೆಗ್ಗಿನಮಠ ಸಂಸ್ಥಾನ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ತೆಗ್ಗಿನ ಮಠ ಆವರಣದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ 79ನೇ ಸಂಸ್ಮರಣೆ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.  
ಸಾಮೂಹಿಕ ವಿವಾಹಗಳು ಸನಾತನ ಪರಂಪರೆಯ ಪುನರ್ಜೀವನವಾಗಿವೆ. ಇಲ್ಲಿ ನಡೆಯುವ ಮದುವೆಗಳು ಕುಟುಂಬಗಳ ದೂರದೃಷ್ಟಿಯ ಕನಸುಗಳಾಗಿವೆ. ಮಾನವತೆಯು ನಿಜವಾದ ಧರ್ಮದ ಮೂಲವಾಗಿದ್ದು, ಪಾಲಿಸುವಂತೆ ತಿಳಿಸಿದರು.
ಸಂಸದ ಈ. ತುಕಾರಾಮ್ ಮಾತನಾಡಿ, ಸರ್ಕಾರಗಳು ಮಾಡಬೇಕಾದ ಕೆಲಸ, ಕಾರ್ಯಗಳನ್ನು ಮಠ-ಮಾನ್ಯಗಳು ಮಾಡುತ್ತಿರುವುದು ಶ್ಲಾಘನೀಯ. ಬಡತನದಲ್ಲಿ ಹುಟ್ಟುವುದು ತಪ್ಪಲ್ಲ, ಆದರೆ ಅದರಲ್ಲಿಯೇ ಸಾಯುವುದು ಮಹಾ ಪಾಪ. ತಂದೆ-ತಾಯಿಗಳ ಬದುಕನ್ನು ಮಕ್ಕಳು ಅನುಕರಣೆ ಮಾಡುವ ಮೂಲಕ ಸಂಸ್ಕಾರಯುತ ಜೀವನ ಪಾಲನೆ ಮಾಡಬೇಕೆಂದರು. 
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ವಧು-ವರರು ಒಬ್ಬರನ್ನೊಬ್ಬರು ಅರಿತು ಸುಖೀ ಜೀವನ ನಡೆಸಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಮಾತನಾಡಿದರು. ಡಾ.ಟಿ.ಎಂ. ಜ್ಯೋತಿ ಕಿರಣ್ ಕುಮಾರ್‌ಗೆ ಪ್ರೇರಣಾದಾಯಕ ಮಹಿಳಾ ನಾಯಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 21 ನವ ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net