ಸದಸ್ಯರಾದ ನೆಲ್ಲು ಇಸ್ಮಾಯಿಲ್, ಅಜೀಜುಲ್ಲಾ, ಮಾಜಿ ಸದಸ್ಯ ಅಲ್ಲಾಭಕ್ಷಿ ಹಾಗೂ ಅಂಬಳಿ ರವೀಂದ್ರ ಗೌಡ ಮಾತನಾಡಿ, ಪಟ್ಟಣದಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ, ಗ್ಯಾಸ್ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಗಳನ್ನು ಅಗೆದು, ತೇಪೆ ಹಾಕುವ ಮತ್ತು ಪರವಾನಿಗೆ ನೀಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಯಾವುದೇ ಕಾಮಗಾರಿ ಕೈಗೊಂಡರೂ ನಮ್ಮ ಗಮನಕ್ಕೆ ತರುವುದಿಲ್ಲ ಎಂದು ಆರೋಪಿಸಿದರು.