ನೇಣುಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ನೇಣುಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ
ನೇಣುಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ
Published on

ಪ್ರಮುಖ ಮುಖ್ಯಾಂಶಗಳು

  • ನೇಣು
  • ಆತ್ಮಹತ್ಯೆ
  • ಯುವಕ
ಬಳ್ಳಾರಿ : ಮೊಬೈಲ್‌ನಲ್ಲಿ ಲೈವ್ ವೀಡಿಯೊ ಮಾಡಿಕೊಂಡು ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.
ಇಲ್ಲಿನ ಹುಸೇನ್‌ನಗರದ ನಿವಾಸಿ ಮುನ್ನಿ (23) ಮೃತಳು. ಕಳೆದ ಆರು ತಿಂಗಳಿಂದ ಪತಿಯಿಂದ ದೂರವಿದ್ದ ಮುನ್ನಿಗೆ ಇಬ್ಬರು ಮಕ್ಕಳಿದ್ದಾರೆ. ಪತಿಯಿಂದ ದೂರವಾದ ಬಳಿಕ ಮೊಹಮ್ಮದ್ ಶೆಕ್ಷಾವಲಿ ಎಂಬ ಯುವಕನೊಂದಿಗೆ ಸ್ನೇಹ ಮಾಡಿದ್ದಳು. ಮೊಹಮ್ಮದ್ ಶೇಕ್ ಹಾಗೂ ಮುನ್ನಿ ನಡುವೆ ಮನಸ್ತಾಪ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net