ಹೊನ್ನತ್ತೆಮ್ಮ-ದುರ್ಗಮ್ಮದೇವಿ ತೇರು ಜೋರು

ಹೂವಿನಹಡಗಲಿ ತಾಲೂಕಿನ ಚಿಕ್ಕಕೊಳಚಿ ಗ್ರಾಮದಲ್ಲಿ ಹೊನ್ನತ್ತೆಮ್ಮ ಹಾಗೂ ದುರ್ಗಮ್ಮ ದೇವಿ ರಥೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.
ಹೂವಿನಹಡಗಲಿ ತಾಲೂಕಿನ ಚಿಕ್ಕಕೊಳಚಿ ಗ್ರಾಮದಲ್ಲಿ ಹೊನ್ನತ್ತೆಮ್ಮ ಹಾಗೂ ದುರ್ಗಮ್ಮ ದೇವಿ ರಥೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ದೇವರಿಗೆ ಹರಕೆ ಸಲ್ಲಿಸಿದ ಭಕ್ತರು
  • ಹೂವಿನಹಡಗಲಿ ಚಿಕ್ಕಕೊಳಚಿ ರಥೋತ್ಸವ
ಹೂವಿನಹಡಗಲಿ: ಚಿಕ್ಕಕೊಳಚಿ ಗ್ರಾಮದಲ್ಲಿ ಶ್ರೀ ಹೊನ್ನತ್ತೆಮ್ಮ ಹಾಗೂ ದುರ್ಗಮ್ಮದೇವಿ ರಥೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.
ಮಂಗಳವಾರ ಸಂಜೆ ಆರಂಭಗೊಂಡ ಅವಳಿ ದೈವಗಳ ಉತ್ಸವಮೂರ್ತಿ ಮೆರವಣಿಗೆ ಮಧ್ಯರಾತ್ರಿವರೆಗೆ ಗ್ರಾಮದಾದ್ಯಂತ ಸಂಚರಿಸಿ ಗದ್ದುಗೆ ಕಟ್ಟಿಯಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಗಟ್ಟಿಗಡಗಿ (ಕೇಲೋತ್ಸವ) ಒಂದೊತ್ತಿನವರ ವ್ರತಾಚರಣೆ ಸಂಪನ್ನ ಇತರ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಮೆರವಣಿಗೆ ಬಳಿಕ ದೇವಿಯರ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಿ, ತೇರು ಬೀದಿಯಲ್ಲಿ ಪಟಾಕಿ, ಮದ್ದು ಸುಡಲಾಯಿತು. ಬನ್ನಿಮಹಾಂಕಾಳಿ ಕಟ್ಟೆಯಿಂದ ಆರಂಭಗೊಂಡ ರಥೋತ್ಸವ ದುರ್ಗಾದೇವಿ ದೇವಸ್ಥಾನಕ್ಕೆ ಬಳಿ ಮುಕ್ತಾಯಗೊಂಡಿತು. ಇದೇ ವೇಳೆ ದೀಪೋತ್ಸವ ನೇರವೇರಿತು. ನಂತರ ದೇವರುಗಳನ್ನು ಚೌತಿಕಟ್ಟಿಯಲ್ಲಿ ಪ್ರತಿಷ್ಠಾಪಿಸಲಾಯಿತು.
ಅಗಸಿ ತೆರವು: ಜಾತ್ರೆ ಆರಂಭಕ್ಕೆ ಮೂರು ದಿನ ಮುಂಚೆ ಊರಿನ ಸುತ್ತ ಹಾಕಲಾಗಿದ್ದ ಅಗಸಿಯನ್ನು (ಮುಳ್ಳಿನ ಬೇಲಿ) ರಥೋತ್ಸವ ಮುಗಿದು ಹುಲುಸು (ಚರಗ) ಚೆಲ್ಲಿದ ಮೇಲೆ ತೆರವುಗೊಳಿಸಲಾಯಿತು. ಭಕ್ತರು ಮನೆಯಿಂದ ಚೌತಿಕಟ್ಟೆವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದರು. ಬಹುತೇಕರು ದೇವಿಯರಿಗೆ ಉಡಿ ತುಂಬಿದರೆ, ಕೆಲವರು ಬೆಳ್ಳಿ ಆಭರಣ, ಇತರ ಸಾಮಗ್ರಿಗಳನ್ನು ದೇಗುಲಕ್ಕೆ ನೀಡಿ ಭಕ್ತಿ ಮೆರೆದರು.
ಐನೋರ್ ಹಾಲಯ್ಯ, ದೈವಸ್ಥರಾದ ಹರಿಪುರದ ನಾಗರಾಜಪ್ಪ, ಕುರುವತ್ತಿ ಹಾಲೇಶಪ್ಪ, ಕೆ.ಬಸವರಾಜ, ಕೆ.ಶ್ರೀಧರ, ನಂದಿಹಳ್ಳಿ ಹೇಮಣ್ಣ, ಕಚ್ಚರಬಿ ಶಿವಪುತ್ರಪ್ಪ, ಈಶಾಪುರದ ಕೇಶಪ್ಪ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net