ದೇವಸ್ಥಾನದಲ್ಲಿ ಗಣಪತಿ, ನವಗ್ರಹ ಹೋಮ ಹಾಗೂ ವರುಣಯಾಗವನ್ನು ನಡೆಸಲಾಯಿತು. ಯಾಗಕ್ಕೂ ಮುನ್ನ ದುರ್ಗಮ್ಮ ದೇವಿಗೆ ಅಭಿಷೇಕ, ಕುಂಕುಮಾರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ನೂರಾರು ರೈತರು, ಮಾಜಿ ಸಚಿವ ಬಿ.ನಾಗೇಂದ್ರ ಅವರ ಬೆಂಬಲಿಗರು ಹಾಗೂ ಭಕ್ತರು ಯಾಗದಲ್ಲಿ ಭಾಗವಹಿಸಿ ಉತ್ತಮ ಮಳೆಯಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಲಿ, ರೈತರ ಬೆಳೆ ಸಮೃದ್ಧವಾಗಿ, ರಾಜ್ಯದಲ್ಲಿ ಸುಭಿಕ್ಷ ನೆಲೆಸಲಿ ಎಂದು ಪ್ರಾರ್ಥಿಸಿದರು..