ಬಳ್ಳಾರಿ : ಹೋಳಿ ಹಬ್ಬದ ಅಂಗವಾಗಿ ನಗರದಲ್ಲಿ ತಡರಾತ್ರಿ ಕಾಮದಹನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಇಲ್ಲಿನ ನಾನಾ ಪ್ರದೇಶಗಳಲ್ಲಿ ಯುವಕರು ಸೇರಿಕೊಂಡು ಸಂಪ್ರದಾಯ ಬದ್ಧವಾಗಿ ಕಾಮದಹನ ನೆರವೇರಿಸಿದರು. ಕಾಮ ದಹನದ ನಂತರ ಬಣ್ಣಗಳ ಆಟ ಶುರುವಾಗಿ, ಮಕ್ಕಳು, ಯುವಕರು, ಮಹಿಳೆಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಡಿಜೆ ಸೌಂಡ್‌ಗಳಿಗೆ ತಾಳ ಹಾಕಿದ ಯುವಕರು ನೃತ್ಯ ಮಾಡಿ ಹಬ್ಬದ ಉತ್ಸಾಹ ಹೆಚ್ಚಿಸಿದರು. ಪೊಲೀಸ್ ಇಲಾಖೆ ಭದ್ರತಾ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದೇ ಹಬ್ಬ ಶಾಂತಿಯುತವಾಗಿ ನಡೆಯಿತು.