ಉನ್ನತ ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ

ಸಣಾಪುರ ಗ್ರಾಮದಲ್ಲಿ ಕನಕದಾಸರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿದರು.
ಸಣಾಪುರ ಗ್ರಾಮದಲ್ಲಿ ಕನಕದಾಸರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿದರು.
Published on
ಕಂಪ್ಲಿ: ಹಾಲುಮತ ಸಮಾಜ ರಾಜಕೀಯ ಸೇರಿದಂತೆ ನಾನಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ನಂ.3 ಸಣಾಪುರದಲ್ಲಿ ಕನಕ ವೃತ್ತದಲ್ಲಿ ಕನಕದಾಸ ಪ್ರತಿಮೆ ಅನಾವರಣಗೊಳಿಸಿ ಭಾನುವಾರ ಮಾತನಾಡಿದರು. ಸಣಾಪುರದಲ್ಲಿ ಕನಕ ವೃತ್ತ ರಚಿಸಿ, ಕನಕದಾಸರ ಪ್ರತಿಮೆ ಸ್ಥಾಪಿಸುವಂತೆ ಹಾಲುಮತ ಸಮುದಾಯದವರು ಬಹಳ ವರ್ಷಗಳಿಂದ ಒತ್ತಾಯಿಸಿದ್ದು, ಬೇಡಿಕೆ ಇದೀಗ ಸಾಕಾರಗೊಂಡಿದೆ. ಸಿದ್ಧರಾಮಯ್ಯ ದೇಶ ಕಂಡ ಅಪ್ರತಿಮ ಮುಖ್ಯಮಂತ್ರಿಯಾಗಿದ್ದಾರೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಟ್ಟಲ್ಲಿ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.
ಕನಕ ಯುವಕ ಸಂಘದ ಅಧ್ಯಕ್ಷ ಕಂಬಳಿ ಚನ್ನಪ್ಪ ಮಾತನಾಡಿ, ಸಣಾಪುರ ಗ್ರಾಮದಲ್ಲಿ ಹಾಲುಮತಸ್ಥರ ಸಾಮಾಜಿಕ ಚಟುವಟಿಕೆಗಳಿಗಾಗಿ ಕನಕ ಸಮುದಾಯ ಭವನ ನಿರ್ಮಿಸಬೇಕೆಂದು ಶಾಸಕರನ್ನು ಒತ್ತಾಯಿಸಿದರು. ಇದಕ್ಕೂ ಮುನ್ನ ಗ್ರಾಮದಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಯಿತು.
ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ಗೌಡ್ರು ಡಿಂಡಿಮಹರ್ಷಿ, ಪ್ರಮುಖರಾದ ಕೆ.ಶ್ರೀನಿವಾಸರಾವ್, ಪಿ.ಮೂಕಯ್ಯಸ್ವಾಮಿ, ಸಿ.ಯಂಕಪ್ಪ, ಕನಕ ಯುವಕ ಸಂಘದ ಪದಾಧಿಕಾರಿಗಳಾದ ಒಂಟೆ ವಿನೋದಕುಮಾರ್, ಪುಂಡೆ ಭೀಮಪ್ಪ, ಕಂಬಳಿ ಅಂಬಣ್ಣ, ವೀರೇಶ್, ಈರಣ್ಣ ಸುಂಕ್ಲಮ್ಮವ್ವ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net