ಕುಟುಂಬ ನಿರ್ವಹಣೆಗೆ ಅನುಕೂಲ

ಬಳ್ಳಾರಿ ತಾಲೂಕಿನ ಎಂ.ಗೋನಾಳ್ ಗ್ರಾಮದಲ್ಲಿ ಆಯೋಜಿಸಿದ್ದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ  ಗ್ಯಾರಂಟಿ ಯೋಜನೆಗಳ ಜಾಗೃತಿ ಮೂಡಿಸುವ ಮಾಹಿತಿ ಕರಪತ್ರಗಳನ್ನು ಮಹಿಳೆಯರಿಗೆ ವಿತರಿಸಲಾಯಿತು. ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ , ತಾಲೂಕು ಎಂ.ನಾಗಭೂಷಣ ಗೌಡ, ಸದಸ್ಯೆ ಎನ್.ಗೀತ, ತಾಪಂ ಇಒ ಶ್ರೀಧರ ಬಾರಿಕರ್, ಪಿಡಿಒ ರಾಜಕುಮಾರ ಇತರರಿದ್ದರು. ===

Published on

ಪ್ರಮುಖ ಮುಖ್ಯಾಂಶಗಳು

  • ಆರ್ಥಿಕ ಸಬಲೀಕರಣದತ್ತ
ಬಳ್ಳಾರಿ : ಗೃಹಲಕ್ಷ್ಮೀ ಯೋಜನೆಯ ನೆರವು ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಹಾಗೂ ಮನೆ ನಿರ್ವಹಣೆಗೆ ಸಮರ್ಪಕವಾಗಿ ಬಳಕೆಯಾಗುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಹೇಳಿದರು.
ತಾಲೂಕಿನ ಎಂ.ಗೋನಾಳ್ ಗ್ರಾಮದಲ್ಲಿ ಗೃಹಲಕ್ಷ್ಮೀ ಯೋಜನೆ ಯಶ್ವಸಿಯಾಗಿ ಮೂರು ವರ್ಷದ ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಯೋಜನೆಯೂ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮಹಿಳೆಯರ ಆರ್ಥಿಕ ಸಬಲೀಕರಣದತ್ತ ಇಟ್ಟ ಪ್ರಮುಖ ಹೆಜ್ಜೆಯಾಗಿದೆ ಎಂದರು. ತಾಪಂ ಇಒ ಶ್ರೀಧರ ಬಾರಿಕರ್ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ದೊರೆಯುವ ಯೋಜನೆಗಳು, ಸ್ವಚ್ಛತೆ, ಉದ್ಯೋಗ ಖಾತರಿ ಹಾಗೂ ಅರ್ಜಿ ಸಲ್ಲಿಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net